ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣರು
ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣರು
ಶಹಪುರ : ಜಗದ್ಗುರು ಶ್ರೀ ರೇಣುಕಾಚಾರ್ಯರು ವೀರಶೈವ ಧರ್ಮದ ಮಹಾನ್ ಶರಣರಲ್ಲಿ ಪ್ರಮುಖರು,ಇವರ ತತ್ವ ಸಿದ್ಧಾಂತಗಳನ್ನು,ಜೀವನ ಚರಿತ್ರೆ ಮತ್ತು ಧಾರ್ಮಿಕ ಸಾಧನೆಗಳು ಭಾರತೀಯ ಸಾಮಾಜಿಕ ಮತ್ತು ಧಾರ್ಮಿಕ ಚರಿತ್ರೆಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದುಕೊಂಡಿವೆ ಎಂದು ಶಿವಲಿಂಗಯ್ಯಸ್ವಾಮಿ ಗಣಾಚಾರಿಮಠ ಹೇಳಿದರು.
ತಾಲೂಕಿನ ಸಗರ ಗ್ರಾಮದ ಶ್ರೀ ಗುರುಲಿಂಗೇಶ್ವರ ಹಿರೇಮಠದಲ್ಲಿ ಹಮ್ಮಿಕೊಂಡಿರುವ ರೇಣುಕಾಚಾರ್ಯರ ಜಯಂತಿ ಉಪಯುಕ್ತ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು, ಇವರು ಅತಿ ಹೆಚ್ಚು ಶೈವ ತತ್ವಗಳನ್ನು ಅಧ್ಯಯನ ಮಾಡಿ ಪ್ರಚಾರಪಡಿಸಿದರು ಎಂದು ನುಡಿದರು.
ಲಿಂಗಾಯತ ಧರ್ಮದ ಮೂಲ ಸಿದ್ಧಾಂತಗಳನ್ನು ಮುನ್ನೆಲೆಗೆ ತರುವುದರ ಜೊತೆಗೆ ಶೈವ ಪರಂಪರೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಮಾಜ ಸೇವೆ ಗಯ್ಯುತ್ತಾ ತಮ್ಮ ಬದುಕನ್ನು ಸವೆಸಿದರು ಎಂದು ಕಿರಣ ವ್ಯಾಪಾರ ವರ್ತಕರ ಸಂಘದ ಹಿರಿಯ ಮುಖಂಡರಾದ ಸಂಗಣ್ಣ ತುಂಬಗಿ ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಸಂತೋಷಗೌಡ ಸುಬೇದಾರ,ಪ್ರಕಾಶ್ ದೇಸಾಯಿ, ಸಿದ್ದಯ್ಯಸ್ವಾಮಿ ಸ್ಥಾವರಮಠ,ದೇವೇಂದ್ರಪ್ಪ ಶಿಣ್ಣೂರ,ಶಿವು ಮಲ್ಲೆದ ಹಾಗೂ ಇನ್ನಿತರರು ಉಪಸ್ಥಿತರಿದ್ದರು
