ಉದ್ಯಮಶೀಲತೆ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ ಶಶೀಲ್ ಜಿ ನಮೋಶಿ

ಉದ್ಯಮಶೀಲತೆ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ ಶಶೀಲ್ ಜಿ ನಮೋಶಿ

ಉದ್ಯಮಶೀಲತೆ ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಿದೆ ಶಶೀಲ್ ಜಿ ನಮೋಶಿ 

ಕಲಬುರ್ಗಿ ಸ04 :ಉದ್ಯಮಶೀಲತೆಯು ಆರ್ಥಿಕ ಬೆಳವಣಿಗೆ, ಉದ್ಯೋಗ ಸೃಷ್ಟಿ, ನಾವೀನ್ಯತೆ ಮತ್ತು ಸಾಮಾಜಿಕ ಅಭಿವೃದ್ಧಿ ಸೇರಿದಂತೆ ಅನೇಕ ಕಾರಣಗಳಿಗಾಗಿ ಮಹತ್ವದಾಗಿದೆ.ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ಹೇಳಿದರು.

ಅವರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್, ಐಟಿಬಿಟಿ, ಕರ್ನಾಟಕ ಸರಕಾರದ ಎಸ್ ಅಂಡ್ ಟಿ ಸಹಯೋಗದಲ್ಲಿ ಸ್ಯಾಕ್ ಸಭಾಂಗಣದಲ್ಲಿ ನಡೆದ ಇನ್ನೋವೆಶನ್ ಔಟ್ ರಿಚ್ ಪ್ರೋಗ್ರಾಂ ಉದ್ಘಾಟಿಸಿ ಮಾತನಾಡುತ್ತಿದ್ದರು 

ಹೊಸ ಕಲ್ಪನೆಗಳನ್ನು ಕಾರ್ಯಗತಗೊಳಿಸಲು, ಮಾರುಕಟ್ಟೆಗೆ ಹೊಸ ಉತ್ಪನ್ನಗಳನ್ನು ತರಲು, ಆರ್ಥಿಕತೆಯನ್ನು ಬೆಳೆಸಲು ಮತ್ತು ಜನರಿಗೆ ಉತ್ತಮ ಜೀವನ ಮಟ್ಟವನ್ನು ಒದಗಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ನಮ್ಮ ಜಿಲ್ಲೆಯ ಉಸ್ತುವಾರಿ ಸಚಿವರು ರಾಜ್ಯದ ಐಟಿಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನದ ಸಚಿವರಾದ ಮಾನ್ಯ ಪ್ರಿಯಾಂಕ್ ಖರ್ಗೆ ಅವರ ಸಹಕಾರದಿಂದ ನಮ್ಮ ಸಂಸ್ಥೆಯ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಜೋತೆ ರಾಜ್ಯ ಸರ್ಕಾರದ ಐಟಿಬಿಟಿ ಇಲಾಖೆಯ ಕೆಡಿಇಎಮ್ ಜೋತೆ ಒಡಂಬಡಿಕೆಯಾಗಿದೆ ಇದರಿಂದಾಗಿ ನಮ್ಮ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸದಾ ನಮ್ಮ ಸಂಸ್ಥೆಗೆ ಸಹಕಾರ ನೀಡುತ್ತಿರುವ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು 

ನಂತರ ಮ್ಯಾನೇಜರ್ ಮಾರ್ಕೇಟಿಂಗ್ ಐಂಡ್ ಔಟರೀಚ್ ಕರ್ನಾಟಕ ಇನ್ನೋವೇಶನ್ ಐಂಡ್ ಟೆಕ್ನಾಲಾಜಿ ಸೋಸೈಟಿಯ ಜೈ ಕೃಷ್ಣ ರಮೇಶ್ ಮಾತನಾಡಿ 

ನಾವೀನ್ಯತೆ ಮತ್ತು ಉದ್ಯಮಶೀಲತೆಯ ಬಗ್ಗೆ ಜಾಗೃತಿ ಮತ್ತು ಜ್ಞಾನವನ್ನು ವಿದ್ಯಾರ್ಥಿಗಳು ಮತ್ತು ಯುವಜನರಿಗೆ ಹರಡುವ ಒಂದು ಉಪಕ್ರಮವೇ ಇನ್ನೋವೇಶನ್ ಔಟ್ರೀಚ್ ಕಾರ್ಯಕ್ರಮವಾಗಿದೆ ಎಂದುಹೇಳಿದರು ಕಾರ್ಯಾಗಾರಗಳು, ಅತಿಥಿ ಉಪನ್ಯಾಸಗಳು ಮತ್ತು ಸೃಜನಶೀಲತೆ, ಸಮಸ್ಯೆ ಪರಿಹಾರ ಮತ್ತು ಆಲೋಚನೆಗಳನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸುವ ಮನಸ್ಥಿತಿಯನ್ನು ಬೆಳೆಸುವ ಸವಾಲುಗಳನ್ನು ನಡೆಸುವ ಮೂಲಕ ಇದನ್ನು ನಡೆಸಲಾಗುತ್ತದೆ ಎಂದು ಹೇಳಿದರು 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೆ ಎಸ್ ಎಪ್ ಸಿ ಕಲಬುರ್ಗಿ ಬ್ರಾಂಚ್ ಮ್ಯಾನೇಜರ್ ಡಾ ಚಂದ್ರಕಾಂತ ಚಂದಾಪೂರ ಮಾತನಾಡಿ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸಿದರು 

ಕಾರ್ಯಕ್ರಮದಲ್ಲಿ ಕೆಡಿಇಎಂ ನಾ ಪ್ರೊಜೆಕ್ಟ್ ಮ್ಯಾನೇಜರ್ ಸಂಜಯ್ ಜಿ ಎಸ್, ಕಾಲೇಜಿನ ಪ್ರಾಚಾರ್ಯರಾದ ಎಸ್ ಆರ್ ಪಾಟೀಲ್,ಉಪ ಪ್ರಾಚಾರ್ಯರಾದ ಡಾ ಎಸ್ ಆರ್ ಹೊಟ್ಟೆ, ಡಾ ಭಾರತಿ ಹರಸೂರ, ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾ,ಕಾರ್ಯಕ್ರಮ ಸಂಯೋಜಕರಾದ ಡಾ ಪರಮೇಶ್ವರ್ ಬಿರಾದಾರ,ಡಾ ನಾಗೇಶ್ ಸಾಲಿಮಠ, ಪ್ರೋ ಸಿದ್ಧರಾಮ ಸಂಗೋಳಗಿ ಉಪಸ್ಥಿತರಿದ್ದರು 

ಕಾರ್ಯಕ್ರಮದಲ್ಲಿ ಕುಮಾರಿ ಮಾಧುರಿ ಪ್ರಾರ್ಥಿಸಿದರು, ಪ್ರೋ ಸೌಮ್ಯ ಗಾಯತೊಂಡ ಅತಿಥಿಗಳನ್ನು ಪರಿಚಯಿಸಿದರು, ಪ್ರೋ ಕಾವೇರಿ ಕೋರಿ ನಿರೂಪಿಸಿದರು