ಮಾರ್ಗದರ್ಶಿ ಸಂಸ್ಥೆ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ

ಮಾರ್ಗದರ್ಶಿ ಸಂಸ್ಥೆ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ  ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ

ಮಾರ್ಗದರ್ಶಿ ಸಂಸ್ಥೆ ವತಿಯಿಂದ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ

ಕಲಬುರಗಿ: ಮಾರ್ಗದರ್ಶಿ ಸಂಸ್ಥೆ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ಸ್ ಆಕ್ಸೆಸ್ ಟು ಜಸ್ಟೀಸ್ ಯೋಜನೆ ಅಡಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ನಗರದ ರೈಲ್ವೆ ನಿಲ್ದಾಣದಲ್ಲಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ಮಂಜುಳಾ ಪಾಟೀಲ್ ಅವರು ಉದ್ಘಾಟಿಸಿದರು.

ರೈಲ್ವೆ ಸಹಾಯಕ ಮ್ಯಾನೇಜರ್ ಜಿಆರ್‌ಪಿ ಮತ್ತು ಆರ್ ಪಿ ಎಫ್ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಗಳು ಡಾನ್ ಬಾಸ್ಕೋ ಸಂಸ್ಥೆಯ ಸಿಬ್ಬಂದಿಗಳು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಸಿಬ್ಬಂದಿಗಳು ಹಾಗೂ ಮಕ್ಕಳ ಸಹವಾಣಿಯ ಸಂಯೋಜಕರು ಮತ್ತು ಸಿಬ್ಬಂದಿಯವರು ಮಕ್ಕಳ ಹೆಲ್ಪ್ ಡೆಸ್ಕ್ ಸಿಬ್ಬಂದಿಗಳು ಮಾರ್ಗದರ್ಶಿ ಸಂಸ್ಥೆಯ ಸಿಬ್ಬಂದಿಗಳು ಸಂಯೋಜಕರು ಶ್ರೀಮತಿ ಶೀತಲ್ ಕಟ್ಟಿಕೆ ಅವರು ಭಾಗವಹಿಸಿ ರೈಲ್ವೆ ಪ್ಲಾಟ್ ಫಾರ್ಮ್ ಮೇಲೆ ಮಾನವ ಕಳ್ಳ ಸಾಗಣಿಕೆ ವಿರೋಧಿ ಕುರಿತು ಘೋಷಣೆಗಳನ್ನು ಕೂಗುತ್ತಾ ಮಾನವ ಕಳ್ಳ ಸಾಗಣಿಕೆ ವಿರೋಧಿಸಿ ಜಾಗೃತಿ ಮೂಡಿಸುವ ಜಾಥಾ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ ಜುಲೈ ತಿಂಗಳ 30ನೇ ತಾರೀಖಿನವರೆಗೆ ವಿವಿಧ ನಿಲ್ದಾಣಗಳಿಗೆ ರೈಲಿನಲ್ಲಿ ಮಕ್ಕಳನ್ನು ಹುಡುಕುತ್ತ ಮಾರ್ಗದರ್ಶಿ ಸಂಸ್ಥೆಯ ನಿರ್ದೇಶಕರಾದ ಆನಂದ್ ರಾಜ್ ಅವರು ಕಲ್ಬುರ್ಗಿ ಯಾದಗಿರಿ ಮತ್ತು ರಾಯಚೂರು ವಿಕಾರಾಬಾದ್ ಮಂತ್ರಾಲಯ ಮತ್ತು ಸೊಲ್ಲಾಪುರದವರೆಗೆ ರೈಲ್ವೆ ದಲ್ಲಿ ಪ್ರಯಾಣಿಸಿ ಮಕ್ಕಳನ್ನು ರಕ್ಷಣೆ ಮಾಡತಕ್ಕಂಥ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು

.