ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ

ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಹಾಗೂ ಶಾಲಾ ವಾರ್ಷಿಕೋತ್ಸವ

ಕೋಟನೂರ (ಡಿ)ಯ ಶ್ರೀ ಬಸವೇಶ್ವರ ಏಜುಕೇಶನ ಟ್ರಸ್ಟನ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ ಮತ್ತು ಸ್ವಾಮಿ ವಿವೇಕಾನಂದ ಜ್ಞಾನ ಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜ.೧೨ ರಂದು ಸಾಯಂಕಾಲ ೫.೦೦ ಗಂಟೆಗೆ ಕೋಟನೂರ ಮಠದ ಎದುರುಗಡೆ ಇರುವ ಶುಭಂ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. . 

ಗೋಳಾ (ಬಿ)ದ ಹೊಸಮಠದ ಪರಮ ಪೂಜ್ಯ ಶ್ರೀ ಚೆನ್ನಮಲ್ಲ ದೇವರು ದಿವ್ಯ ಸಾನಿಧ್ಯ ವಹಿಸಲಿದ್ದು, ವಿಧಾನ ಪರಿಷತ್ ಸದಸ್ಯರಾದ ಡಾ. ಶಶಿಲ್ ಜಿ. ನಮೋಶಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಲಬುರಗಿಯ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್. ಡಿ., ಸಿದ್ದಶ್ರೀ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ. ಬಸವರಾಜ ಸಿ. ಹಿರೇಮಠ ಮತ್ತು ವಿದ್ಯಾ ಭಾರತಿ ಸಂಸ್ಥೆಯ ಸಂರಕ್ಷಣಾದ ಚನ್ನವೀರಪ್ಪ ಗುಡ್ಡಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಶ್ರೀ. ಬಸವರಾಜ ಎಸ್. ದೇಶಮುಖ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. 

ಕಲಬುರಗಿ ಜಿಲ್ಲಾ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಅನಿತಾ ಪವನಕುಮಾರ ವಳಕೇರಿ, ಅಪ್ಪಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ. ರಾಜಕುಮಾರ ಬಿ. ಉದನೂರ, ನರೋಣದ ಸರಕಾರಿ ಪಿ.ಯು. ಕಾಲೇಜಿನ ಉಪನ್ಯಾಸಕ ಶ್ರೀ. ಬಸವರಾಜ ಬಿ. ಜೋಗುರ ಅವರು ಉಪಸ್ಥಿತಿ ಇರಲಿದ್ದು, ಆಳಂದದ ಸಮೂಹ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಶ್ರೀ. ಚಂದ್ರಶೇಖರ ಎಸ್ ಕಟ್ಟಿಮನಿ ಮತ್ತು ಮೈಸೂರಿನ ರಾಮಕೃಷ್ಣ ಆಶ್ರಮದ ಸಕ್ರಿಯ ಕಾರ್ಯಕರ್ತರು ಮತ್ತು ಖ್ಯಾತ ವಾಗ್ಮಿಗಳಾದ ಶ್ರೀ. ವಿರಾಜ ಮಂಗಲಗಿ ಅವರು ಮಉಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ನಂತರ ಸ್ವಾಮಿ ವಿವೇಕಾನಂದ ಜ್ಞಾನಮಂದಿರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸುವರು