ಸಾರಿಗೆ ವ್ಯವಸ್ಥೆಯಿಂದ ವಂಚಿತವಾದ ಗುಡೂರ್ ಎಸ್ ಎನ್ ಗ್ರಾಮ. ಮಕ್ಕಳ ಪಾಡು ಕೇಳೋರಿಲ್ಲ
ಸಾರಿಗೆ ವ್ಯವಸ್ಥೆಯಿಂದ ವಂಚಿತವಾದ ಗುಡೂರ್ ಎಸ್ ಎನ್ ಗ್ರಾಮ. ಮಕ್ಕಳ ಪಾಡು ಕೇಳೋರಿಲ್ಲ
ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಗುಡೂರ (ಎಸ್ ಎನ್) ಗ್ರಾಮಕ್ಕೆ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಸರ್ಕಾರಿ ಬಸ್ ವ್ಯವಸ್ಥೆ ಇಲ್ಲ.
ಈ ಗ್ರಾಮದಲ್ಲಿ ನೂರಾರು ಜನ ಸರ್ಕಾರಿ ನೌಕರರು, ದೈಹಿಕ ನ್ಯೂನತೆ(ಪಿ ಹೆಚ್)ಯುಳ್ಳವರು,ವ್ಯಾಪಾರಸ್ಥರು, ಉದ್ಯೋಗಿಗಳು,ವಿದ್ಯಾರ್ಥಿಗಳು ವರ್ಷದ ಪ್ರತಿ ದಿನ ಚಳೆಗಾಲ,ಮಳೆಗಾಲ,ಬೇಸಿಗೆಯಲ್ಲಿಯೂ ಪ್ರತಿ ನಿತ್ಯ ನಡೆದಾಡಿಕೊಂಡೆ ಮುಖ್ಯ ರಸ್ತೆಗೆ ಬಂದು ತಮ್ಮ ಕೆಲಸಕ್ಕೆ ಹೋಗುತ್ತಿದ್ದೇವೆ; ಎಂದು ವರದಿಗಾರರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಜೇವರ್ಗಿ ತಾಲೂಕಿನ ಶಾಸಕರಿಗಾಗಲಿ, ಅಥವಾ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗಾಗಲಿ ಗಮನಕ್ಕೆ ಬಂದಿಲ್ವೇ...? ಅಥವಾ ನಮಗೆ ಸ್ವಾತಂತ್ರವೇ ಸಿಕ್ಕಿಲ್ವೇ? ನಾವು ಸರ್ಕಾರಕ್ಕೆ ಮತ್ತು ರಾಜಕಾರಣಿಗಳಿಗೆ ಉಪಯೋಗ ಬಾರದವರಾಗಿದ್ದೇವೆಯೇ..? ನಾವು ನಮ್ಮ ದಿನ ನಿತ್ಯ ಜೀವನದ ಕರ್ತವ್ಯ ಹೇಗೆ ನಿರ್ವಹಿಸಬೇಕು,ಹೇಗೆ ಬದುಕಬೇಕು,ವಿದ್ಯಾರ್ಥಿಗಳ ,ವೈಯೋ-ವೃದ್ದರ ಗತಿ ಹೇಗೆ? ಎಂದು ಸಾರ್ವಜನಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಸಂಬಂದ ಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟು ದಿನ ಕಾದು-ಕಾದು ಸಾಕಾಗಿ ಸುಸ್ತಾಗಿದ್ದೇವೆ,ಈಗಲಾದರು ಎಚ್ಚೆತ್ತುಕೊಂಡು ಅತೀ ಶೀಘ್ರದಲ್ಲೇ ನಮ್ಮ ಗ್ರಾಮಕ್ಕೆ ಬಸ್ ಬಿಡುವ ವ್ಯವಸ್ತೆ ಮಾಡಬೇಕು ಒಂದು ವೇಳೆ ಈ ವಿಷಯದ ಕುರಿತು ನಿರ್ಲಕ್ಷ ತೋರಿದ್ದೇ ಆದಲ್ಲಿ ಮುಂಬರುವ ದಿನಗಳಲ್ಲಿ ಶಾಸಕರ ಕಚೇರಿಯ ಮುಂದೆ ಹಾಗೂ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮುಂದೆ ಗ್ರಾಮಸ್ಥರೊಂದಿಗೆ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಎಚ್ಚರಿಕೆ ನೀಡಿದ್ದಾರೆ. ವರದಿ ಜೆಟ್ಟಪ್ಪ ಎಸ್ ಪೂಜಾರಿ