ಎಸ್.ಎಂ. ಹಿರೇಮಠ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ’ ಪ್ರಶಸ್ತಿ ಪ್ರದಾನ

ಎಸ್.ಎಂ. ಹಿರೇಮಠ ಅವರಿಗೆ ‘ಶ್ರೀ ಚೆನ್ನರೇಣುಕ ಬಸವ’ ಪ್ರಶಸ್ತಿ ಪ್ರದಾನ
ಕಲಬುರಗಿ : ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಕಲಬುರಗಿಯ ಖ್ಯಾತ ಸಾಹಿತ್ಯಕಾರ, ಸಂಶೋಧಕ ಮತ್ತು ಶಿಕ್ಷಣ ತಜ್ಞರಾದ ಎಸ್.ಎಂ. ಹಿರೇಮಠ ಅವರಿಗೆ ಪ್ರತಿಷ್ಠಿತ "ಶ್ರೀ ಚೆನ್ನರೇಣುಕ ಬಸವ’ ಪ್ರಶಸ್ತಿ" ನೀಡಿ ಗೌರವಿಸಲಾಗುತ್ತಿದೆ.
ಈ ಪ್ರಶಸ್ತಿಯು "₹1 ಲಕ್ಷ ನಗದು, ಎರಡು ತೊಲೆ ಚಿನ್ನದ ಪದಕ ಹಾಗೂ ಫಲಕವನ್ನು" ಒಳಗೊಂಡಿದ್ದು, ಹಿರೇಮಠ ಅವರ ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ನೀಡಿದ ಅಪಾರ ಸೇವೆ ಹಾಗೂ 300ಕ್ಕೂ ಹೆಚ್ಚು ಗ್ರಂಥಗಳ ರಚನೆಗೆ ಮಾನ್ಯತೆ ನೀಡುವ ಉದ್ದೇಶದಿಂದ ಪ್ರದಾನ ಮಾಡಲಾಗುತ್ತಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 1ರಂದು ಮಠದಲ್ಲಿ ನಡೆಯುವ ‘ಅನುಭಾವ ಪ್ರಚಾರ ಉಪನ್ಯಾಸ ಮಾಲೆ’ ಕಾರ್ಯಕ್ರಮದ ಸಂದರ್ಭದಲ್ಲಿ ಜರುಗಲಿದೆ ಎಂದು ಸಂಸ್ಥಾನದವರು ತಿಳಿಸಿದ್ದಾರೆ.