ಪೋಲಿಸ್ ಇಲಾಖೆಯಲ್ಲಿ ದಶಕಗಳ ಸೇವೆಗೆ ಸಿಪಿಐ ಜಗದೇವಪ್ಪ ಪಾಳಾ, ಹಾಗೂ ತಿಗಡಿ ಅವರಿಗೆ ಗೌರವ

ಪೋಲಿಸ್ ಇಲಾಖೆಯಲ್ಲಿ ದಶಕಗಳ ಸೇವೆಗೆ ಸಿಪಿಐ ಜಗದೇವಪ್ಪ ಪಾಳಾ, ಹಾಗೂ ತಿಗಡಿ ಅವರಿಗೆ ಗೌರವ
ಕಲಬುರಗಿ: ಯಾವುದೇ ಇಲಾಖೆಯಲ್ಲಿ ಎರಡು ದಶಕಗಳ ಕಾಲ ಕಪ್ಪು ಚುಕ್ಕೆ ಇಲ್ಲದೆ ಸೇವೆ ಸಲ್ಲಿಸುವುದು ಅತ್ಯಂತ ಕಷ್ಟ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಇಂತಹ ಸಾಧನೆ ಮಾಡುವುದು ವಿಶೇಷ. ಈ ಮೈಲುಗಲ್ಲನ್ನು ಸಿಪಿಐ ಜಗದೇವಪ್ಪ ಪಾಳಾ ಹಾಗೂ ಶ್ರೀ ಚಂದ್ರಶೇಖರ್ ತಿಗಡಿ ಸಿಪಿಐ ಅವರು ಸಾಧಿಸಿದ್ದಾರೆ.
ಇವರ ದೀರ್ಘಕಾಲದ ನಿರಂತರ ಶ್ರದ್ಧಾ, ನಿಷ್ಠೆ ಹಾಗೂ ಕಾನೂನು-ಸುವ್ಯವಸ್ಥೆ ಕಾಪಾಡುವ ಬದ್ಧತೆಗೆ ಸಮಾಜದಿಂದ ಪ್ರಶಂಸೆ ವ್ಯಕ್ತವಾಗಿದೆ. "ಈ ಸಾಧನೆ ನಮ್ಮೆಲ್ಲರ ಹೆಮ್ಮೆ," ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಪೊಲೀಸ್ ಇಲಾಖೆಯಲ್ಲಿ ನೀಡಿದ ಮಾದರಿ ಸೇವೆ ಮುಂದಿನ ತಲೆಮಾರಿಗೆ ಪ್ರೇರಣೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
.