ಡಾ. ಗವಿಸಿದ್ಧಪ್ಪ ಪಾಟೀಲರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ

ಡಾ. ಗವಿಸಿದ್ಧಪ್ಪ ಪಾಟೀಲರಿಗೆ ಎರಡು ರಾಷ್ಟ್ರೀಯ ಪ್ರಶಸ್ತಿ
ಕಲಬುರಗಿ :ಪ್ರತಿಷ್ಠಿತ ತ್ರೇತ್ರಾಯುಗ ಸಂಸ್ಥೆಯ ವತಿಯಿಂದ ನೀಡಲಾಗುವ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್ 2025 ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನ್ಯಾಷನಲ್ ಅವಾರ್ಡ್ 2025 ಎಂಬ ಎರಡು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಕಲಬುರಗಿಯ ಖ್ಯಾತ ಸಾಹಿತ್ಯಗಾರ ಡಾ. ಗವಿಸಿದ್ಧಪ್ಪ ಪಾಟೀಲ ಅವರಿಗೆ ಲಭಿಸಿವೆ.
ಡಾ. ಪಾಟೀಲ ಅವರು ಕನ್ನಡ ಸಾಹಿತ್ಯ, ಕಾವ್ಯ, ಕಥೆ, ವಿಮರ್ಶೆ, ಜಾನಪದ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ್ದು, 100ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಗಣ್ಯರ ಜೀವನ ಚರಿತ್ರೆಗಳನ್ನು ರಚಿಸಿ ಪ್ರಕಟಿಸುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡಿದ್ದಾರೆ.
ಇಂತಹ ಅಹರ್ನಿಶಿ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ರಾಷ್ಟ್ರ ಮಟ್ಟದ ಗೌರವ ದೊರೆತಿರುವುದು “ಸೂಕ್ತ ವ್ಯಕ್ತಿಗೆ ಸಂದ ಗೌರವ” ಎಂದು ಸಿರಿಗನ್ನಡ ವೇದಿಕೆಯ ಕಾರ್ಯದರ್ಶಿ ಡಾ. ಸಿದ್ದಪ್ಪ ಹೊಸಮನಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.