ಕನ್ನಡ ಸಾಹಿತ್ಯ ಯುವಕರು ಓದಲಿ.... ಪ್ರಭಾಕರ ಜೋಶಿ

ಕನ್ನಡ ಸಾಹಿತ್ಯ ಯುವಕರು ಓದಲಿ.... ಪ್ರಭಾಕರ ಜೋಶಿ

ಕನ್ನಡ ಸಾಹಿತ್ಯ ಯುವಕರು ಓದಲಿ.... ಪ್ರಭಾಕರ ಜೋಶಿ

ಕನ್ನಡ ಸಾಹಿತ್ಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಪಂಪ ಪೂರ್ವ ಕಾಲದಿಂದಲೂ ಉತ್ಕೃಷ್ಠ ಸಾಹಿತ್ಯ ರಚಿಸಿದ ಅನೇಕ ಕವಿಗಳಿದ್ದಾರೆ‌. ಅವರು ರಚಿಸಿರುವ ಸಾಹಿತ್ಯ ಯುವಕರು ಓದಬೇಕು ಎಂದು ರಂಗಾಯಣ ನಿಕಟ ಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಅವರು ನುಡಿದರು.

 ಸರಕಾರಿ ಪದವಿ ಮಹಾವಿದ್ಯಾಲಯ(ಸ್ವಾಯತ್ತ) ಕಲಬುರಗಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಚಕೋರ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಭಾಕರ ಜೋಶಿ ಅವರು ಉಪನ್ಯಾಸ ನೀಡಿದರು.

ಅಧ್ಯಯನದ ಅನುಕೂಲದ ದೃಷ್ಟಿಯಿಂದ ಸಾಹಿತ್ಯ ವಿಭಾಗಿಸಲಾಗಿದೆ. ಸಾಹಿತ್ಯ ವಿಭಾಗಕ್ಕೆ ಖಚಿತವಾದ ಆಧಾರಗಳು ಸಿಗುವುದಿಲ್ಲ. ಕವಿರಾಜಮಾರ್ಗಕ್ಕಿಂತಲೂ ಪೂರ್ವದಲ್ಲಿ ಕನ್ನಡ ಸಾಹಿತ್ಯ ಇತ್ತು ಎನ್ನುವುದಕ್ಕೆ ಅದೆ ಕೃತಿಯಲ್ಲಿ ಮಾಹಿತಿ ದೊರೆಯುತ್ತದೆ. ಗಾಥಸಪ್ತಸತಿ ಕೃತಿಯಲ್ಲಿ ಕನ್ನಡ ಪದಗಳನ್ನು ಕಾಣುತ್ತೇವೆ. ಪಂಪ ಪೂರ್ವದ ಮಹತ್ವದ ಕವಿ ದುರ್ವಿನಿತ ಪರಾಕ್ರಮಿಯು ಮತ್ತು ಕವಿಯು ಆಗಿದ್ದನು. ಈತ ಗುಣಾಢ್ಯನ ಪೈಶಾಚಿಕ ಭಾಷೆಯ ವಡ್ಡಕಥಾ ಕೃತಿಯನ್ನು ಸಂಸ್ಕೃತಕ್ಕೆ ತರ್ಜುಮೆ ಮಾಡಿದನು. ಪಲ್ಲವರ ರಾಜ ಹಸ್ತಿವರ್ಮನು ಸಹ ಕೃತಿ ರಚಿಸಿದನೆಂದು ತಿಳಿದುಬರುತ್ತದೆ. ಶಿವಕೋಟ್ಯಾಚಾರ್ಯ ರಚಿಸಿರುವ ವಡ್ಡಾರಾಧನೆ ಕೃತಿಯು ಕನ್ನಡದ ಮೊದಲ ಉಪಲಬ್ಧ ಗದ್ಯ ಕೃತಿಯಾಗಿದೆ ಪಂಪ ಪೂರ್ವಯುಗದ ವೈಶಿಷ್ಟ್ಯವನ್ನು ವಿವರಿಸಿದರು.

     ಅಧ್ಯಕ್ಷತೆಯನ್ನು ಡಾ.ಮಲ್ಲೇಶಪ್ಪ ಕುಂಬಾರ ಡೀನರು ಸ್ನಾತಕೋತ್ತರ ವಿಭಾಗ ವಹಿಸಿದ್ದರು. ಡಾ.ಸುರೇಂದ್ರಕುಮಾರ ಕೆರಮಗಿ ರಚಿಸಿದ ಕಲ್ಯಾಣ ಕರ್ನಾಟಕದ ಕಾದಂಬರಿ ಹಾದಿ ಕೃತಯನ್ನು ಇದೇ ದಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಯಿತು.ಡಾ.ಸುರೇಂದ್ರಕುಮಾರ ಕೆರಮಗಿ ಅವರು ಮಾತನಾಡಿದರು ಉಪಸ್ಥಿತಿ ಇದ್ದರು. ಪ್ರಾರ್ಥನೆ ಗೀತೆಯನ್ನು ಕುಮಾರಿ ಕೀರ್ತಿ ಹಾಡಿದರು. ಚಕೋರ ವೇದಿಕೆ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಅಕಾಡೆಮಿ ಸದಸ್ಯರಾದ ಡಾ.ಚಂದ್ರಕಲಾ ಬಿದರಿ ಪ್ರಾಸ್ತಾವಿಕ ನುಡಿ ಆಡಿದರು. ಡಾ.ನಾಗಪ್ಪ ಗೋಗಿ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ನಾರಾಯಣ ರೊಳೇಕರ ವಂದಿಸಿದರು. ಡಾ. ಶಾರದಾದೇವಿ ಜಾಧವ, ಪ್ರೊ.ರಾಠೋಡ, ಪ್ರೊ.ಎಸ್.ಎಲ್.ಮಾಲಿಪಾಟೀಲ, ಡಾ. ಶೈಲಾಜ ಬಾಗೇವಾಡಿ, ಡಾ. ಶಾಮಲಾ ಸ್ವಾಮಿ, ಡಾ. ಸಿದ್ಧಲಿಂಗ ದಬ್ಬಾ, ಡಾ. ಸಿದ್ಧಪ್ಪ ಹೊಸಮನಿ, ಡಾ. ರಾಜಕುಮಾರ ಮಾಳಗೆ, ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತಿ ಇದ್ದರು.