ಕುಮಾರಿ: ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ:

ಕುಮಾರಿ: ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ:

ಕುಮಾರಿ: ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ:

ಅಕ್ಟೋಬರ್ 19 2025 ರಂದು ಶ್ರೀ ಆದಿ ಧನ್ವಂತರಿ ಕ್ಷೇತ್ರ ಪದ್ಮಗಿರಿ, ಜೆಡ್ಡು ಅಳಿಕೆ ಗ್ರಾಮ ಇಲ್ಲಿ ನಡೆಯಲಿರುವ ಶ್ರೀ ಧನ್ವಂತರಿ ಜಯಂತಿಯ ಶುಭ ಸಂದರ್ಭದಲ್ಲಿ ಕುಮಾರಿ: ಸಿಂಚನ ಲಕ್ಷ್ಮಿ ಕೋಡಂದೂರು ಇವರಿಂದ ಭರತನಾಟ್ಯ ಪ್ರಸ್ತುತಿ ನಡೆಯಲಿದೆ. ಇವರು ಪ್ರಸಿದ್ಧ ಚಕ್ರ ಕೋಡಿ ಮನೆತನಕ್ಕೆ ಸೇರಿದ ನಿವೃತ್ತ ಶಿಕ್ಷಕ ರಘುರಾಮ ಶಾಸ್ತ್ರಿ ಹಾಗೂ ಖ್ಯಾತ ಸಂಗೀತ ವಿದುಷಿ ಸವಿತಾ ಶಾಸ್ತ್ರಿ ದಂಪತಿಗಳ ಸುಪುತ್ರಿ. ಸಂಗೀತ ಹಾಗೂ ನಾಟ್ಯ ಎರಡರಲ್ಲಿಯೂ ಅತ್ಯಂತ ಪ್ರೌಢಿಮೆಯನ್ನು ಗಳಿಸಿರುವ ಮಾನ್ಯರು ಹಲವಾರು ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ .ಪ್ರಸ್ತುತ ಇವರು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೊದಲನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ Mtech ವ್ಯಾಸಂಗ ಮಾಡುತ್ತಿದ್ದಾರೆ.