ಪವನಕುಮಾರ ವಳಕೇರಿಗೆ ಜುಲೈ 9ರಂದು ಅಭಿನಂದನಾ ಸಮಾರಂಭ

ಪವನಕುಮಾರ ವಳಕೇರಿಗೆ ಜುಲೈ 9ರಂದು ಅಭಿನಂದನಾ ಸಮಾರಂಭ
ಆರೋಗ್ಯ ಶಿಬಿರ, ಸಾಧಕರಿಗೆ ಸನ್ಮಾನ, ಹಾಸ್ಯ ರಸಮಂಜರಿ ಹಾಗೂ ಅನ್ನದಾನ
ಕಲಬುರಗಿ, ಜು.1: ಕಳೆದ 25 ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಿರುವ ನಂದಿಕೂರ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಹಾಗೂ ಸದಸ್ಯರಾದ ಶ್ರೀ ಪವನಕುಮಾರ ಬಿ. ವಳಕೇರಿಗೆ ಜುಲೈ 9ರಂದು ಬೆಳಿಗ್ಗೆ 11 ಗಂಟೆಗೆ ಕಲಬುರಗಿಯ ಸಾಯಿ ಮಂದಿರ ಹತ್ತಿರವಿರುವ ವಿ.ಎಲ್. ಪಾಟೀಲ ಕಲ್ಯಾಣ ಮಂಟಪದಲ್ಲಿ ಭವ್ಯ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲ ಈ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮವನ್ನು ರಾಜ್ಯ ಸಣ್ಣ ಕೈಗಾರಿಕಾ ಸಚಿವ ಶ್ರೀ ಶರಣಬಸಪ್ಪಾ ದರ್ಶಾನಾಪೂರ ಉದ್ಘಾಟಿಸಲಿದ್ದು, ಅಲ್ಲಮಪ್ರಭು ಪಾಟೀಲ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
---:ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳು:--.
ಸುಮಾರು 200 ಜನರಿಗೆ ಉಚಿತ ದಂತ, ನೇತ್ರ ಹಾಗೂ ಇತರ ವೈದ್ಯಕೀಯ ಸೇವೆಗಳೊಂದಿಗೆ ಆರೋಗ್ಯ ಶಿಬಿರ.
ಪವನಕುಮಾರ ವಳಕೇರಿ ಅವರ 25 ವರ್ಷದ ಸೇವೆಯ ಸ್ಮರಣಾರ್ಥ 25 ಸಾಧಕರಿಗೆ ಸನ್ಮಾನ.
ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇಕಡಾ 85ಕ್ಕಿಂತ ಹೆಚ್ಚಿನ ಅಂಕಗಳಿಸಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನ.
ಪ್ರಸಿದ್ಧ ಹಾಸ್ಯ ಕಲಾವಿದ ಗುಂಡಣ್ಣ ಅಕ್ಕರವರ ತಂಡದಿಂದ ಹಾಸ್ಯ ರಸಮಂಜರಿ.
ಅನಾಥ ಆಶ್ರಮ, ವೃದ್ಧಾಶ್ರಮ ಮತ್ತು ನಿರ್ಗತಿಕರಿಗೆ ಅನ್ನದಾನ.
ದಿವ್ಯ ಸಾನ್ನಿಧ್ಯ: ಡಾ|| ದಾಕ್ಷಾಯಣಿ ಅವ್ಹಾಜಿ (ಶ್ರೀ ಶರಣಬಸವೇಶ್ವರ ಮಹಾಸಂಸ್ಥಾನ), ಡಾ|| ಮುರಘರಾಜೇಂದ್ರ ಮಹಾಸ್ವಾಮಿಗಳು (ಜಿಡಗಾ-ಮುಗಳಖೋಡ ಮಠ), ಶ್ರೀ ಗುರುಪಾದಲಿಂಗ ಮಹಾಸ್ವಾಮಿಗಳು (ಮುತ್ತಾನ ಬಬಲಾದ ಮಠ), ಹಾಗೂ ದಮ್ಮನಾಗ ರವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಶಾಸಕರು ಖನಿಜಾ ಫಾತಿಮಾ, ಬವರಾಜ ಮತ್ತಿಮೂಡ, ತಿಪ್ಪಣ್ಣಪ್ಪ ಕಮಕನೂರ, ಶಶಿಲ ಜಿ. ನಮೋಶಿ, ಬಿ.ಜಿ. ಪಾಟೀಲ, ಜಗದೇವ ಗುತ್ತೇದಾರ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ತಾ.ಪಂ.ಮಾಜಿ.ಅಧ್ಯಕ್ಷರಾದ ಸಂಗಮೇಶ ನಾಗನಹಳ್ಳಿ, ನೀಲಕಂಠರಾವ ಮೂಲಗೆ, ಸುರೇಶ ಬಡಿಗೇರ, ಮಲ್ಲಿನಾಥ ನಾಗನಹಳ್ಳಿ, ಗಣೇಶ ವಳಕೇರಿ, ಸಂತೋಷ ತಳವಾರ ಉಪಸ್ಥಿತರಿದ್ದರು.