ಮನುಷ್ಯರು ಬದುಕು ರೂಪಿಸಿಕೊಳ್ಳಲು ಜಾತ್ರೆ, ಪ್ರವಚನ, ಅತ್ಯಾವಶ್ಯಕ: ಶ್ರೀ ಶಿವಲಿಂಗ ಸ್ವಾಮಿ

ಮನುಷ್ಯರು ಬದುಕು ರೂಪಿಸಿಕೊಳ್ಳಲು ಜಾತ್ರೆ, ಪ್ರವಚನ, ಅತ್ಯಾವಶ್ಯಕ: ಶ್ರೀ ಶಿವಲಿಂಗ ಸ್ವಾಮಿ
ಯಾದಗಿರಿ: ಮನುಷ್ಯರು ತಮ್ಮ ಬದುಕು ರೂಪಿಸಿಕೊಳ್ಳಲು ಜಾತ್ರೆ, ಪ್ರವಚನ, ಕುಂಭಮೇಳ, ಮಹಾಕುಂಬಮೇಳಗಳು ಅತ್ಯಾವಶ್ಯಕ ಎಂದು ಶ್ರೀ ಅಭೀನವ ರಾಮಲಿಂಗ ರಾಜಯೋಗಿ ಸ್ವಾಮಿಯವರ ಸಮ್ಮುಖದಲ್ಲಿ ನಡೆದ ಜ್ಞಾನದಾಸೋಹ ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು, ಕೈಲಾಸಾಶ್ರಮ, ಹೋತಪೇಠ, ಶಹಾಪೂರ ಉಪದೇಶ ನೀಡಿದರು.
ಯಾದಗಿರಿ ತಾಲೂಕಿನ ಸುಕ್ಷೇತ್ರ ಮುದ್ನಾಳ ಗ್ರಾಮದಲ್ಲಿ ಶ್ರೀ ಸಿದ್ಧಾರೂಢರ 38ನೇ ಜಾತ್ರಾ ಮಹೋತ್ಸವ ಶನಿವಾರ ಸಂಜೆ 6 ಗಂಟೆಗೆ ರಥೋತ್ಸವದ ಮೂಲಕ ವಿಜೃಂಭಣೆಯಿಂದ ನೆರವೇರಿತು. ಶ್ರೀ ಆಂಜನೇಯ ದೇವಸ್ಥಾನದಿಂದ ಶ್ರೀ ಸಿದ್ಧಾರೂಢರ ಮಠದವರೆಗೆ ಸುಮಂಗಲೆಯರ ಕಳಸ, ಡೊಳ್ಳು, ಭಾಜಿ, ಹಲಿಗೆ ಮುಂತಾದ ಸಂಗೀತ ವಾದ್ಯಗಳೊಂದಿಗೆ ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪೂಜ್ಯ ಶ್ರೀ ನಿಜಾನಂದ ಮಹಾಸ್ವಾಮಿಗಳು, ಶಾಂತಾಶ್ರಮ, ಮಿಟ್ಟಿಮಲಕಾಪುರು, ರಾಯಚೂರು ಅಧ್ಯಕ್ಷತೆ ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಪೂಜ್ಯ ಶ್ರೀ ಶ್ರೋ.ಬ್ರ. ಬಸವಾನಂದ ಸ್ವಾಮಿಗಳು, ಆರೂಢಾಶ್ರಮ, ಉಜ್ಜಯನಿಮಠ, ಹುಬ್ಬಳ್ಳಿ ಹಾಗೂ ಪೂಜ್ಯ ಶ್ರೀ ಶ್ರೋ.ಬ್ರ. ಪ್ರಭುಲಿಂಗ ಸ್ವಾಮಿಗಳು, ಸಾ.ಲೆಂಗಟೆ, ತಾ. ಕಮಲಾಪುರ ಭಕ್ತಾದಿಗಳಿಗೆ ಉಪದೇಶಾಮೃತ ನೀಡಿದರು.
ರಸ್ತೆ ಉದ್ದಕ್ಕೂ ಭಕ್ತಾದಿಗಳು ಜಲಾಭಿಷೇಕ ಮಾಡಿ ಸ್ವಾಮಿಜಿಗಳಿಗೆ ಗೌರವ ಸಲ್ಲಿಸಿದರು. ಮಠದ ಬಳಿ ಮೆರವಣಿಗೆ ತಲುಪಿದ ನಂತರ ಶ್ರೀಗಳು ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಮಹೇಶ ರೆಡ್ಡಿ ಗೌಡ, ಬಿಜೆಪಿ ಯುವ ಮುಖಂಡರು, ಮುದ್ನಾಳ ಅವರು ರಥಕ್ಕೆ ಕಳಸ ಬೆಳಗಿ ರಥೋತ್ಸವಕ್ಕೆ ಚಾಲನೆ ನೀಡಿದರು. ಅವರು ಮಾತನಾಡಿ, ಶ್ರೀ ಸಿದ್ಧಾರೂಢರ ಜಾತ್ರೆ ನಮ್ಮ ಧಾರ್ಮಿಕ ಪರಂಪರೆಯ ಪ್ರತೀಕ. ಪ್ರತಿ ವರ್ಷ ಜಾತ್ರೆಯಲ್ಲಿ ದಾನಿಯಾಗಿ ಸೇವೆ ಸಲ್ಲಿಸುತ್ತೇನೆ. ಇನ್ನು ಮುಂದೆ ಜಾತ್ರೆಯನ್ನು ಹೆಚ್ಚಿನ ವಿಜೃಂಭಣೆಯಿಂದ ಆಚರಿಸಬೇಕು ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಮಾತನಾಡಿ, ಸಾಧು ಸಂತರ ಆಶೀರ್ವಚನ ಪಡೆದರೆ ನಮ್ಮ ಜೀವನ ಪಾವನವಾಗುತ್ತದೆ ಎಂದರು. ವಿಶ್ವನಾಥ ಕಾವಲಿ ಮುದ್ನಾಳ ಅವರು ಸಹ ಭಕ್ತಾದಿಗಳಿಗೆ ಶುಭಾಶಯಗಳೊಂದಿಗೆ ಮಾತನಾಡಿದರು.
ಈ ವೇಳೆ ದೇವಿಂದ್ರಪ್ಪ ಮುದ್ನಾಳ, ಮರೆಪ್ಪ ಮುದ್ನಾಳ, ಮಲ್ಲಿಕಾರ್ಜುನ ಮುದ್ನಾಳ, ಮರೆಪ್ಪ ಗಾಲೇಪ್ಪ, ಕಾಳಮ್ಮ, ಮಲ್ಲು ಮಾಸ್ತರ ಸೇರಿದಂತೆ ಹಲವಾರು ಮುಖಂಡರು ಹಾಗೂ ಭಕ್ತಾದಿಗಳು ಭಾಗವಹಿಸಿ, ತಮ್ಮ ಸೇವೆಯನ್ನು ಸಲ್ಲಿಸಿದರು.