ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಗೆ ಶಾಲಾ/ಕಾಲೇಜು ವಾಹನ ದಾನ – ಶಶೀಲ ಜಿ. ನಮೋಶಿ ಉದ್ಘಾಟನೆ

ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸ್ಕೂಲ್/ಕಾಲೇಜು ಆಫ್ ನರ್ಸಿಂಗ್ ಕಲಬುರಗಿ, ಸಂಸ್ಥೆಯ ಕಾಲೇಜಿಗೆ ಕರ್ಣಾಟಕ ಬ್ಯಾಂಕ್ ವತಿಯಿಂದ ಶಾಲೆ/ಕಾಲೇಜು ವಾಹನ ಕೊಡುಗೆ ನೀಡಿದ್ದು, ಈ ವಾಹನಕ್ಕೆ ವಿಧಾನ ಪರಿಷತ ಸದಸ್ಯರು ಹಾಗೂ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ ಜಿ ನಮೋಶಿ ಅವರು ಉದ್ಘಾಟಿಸಿ ವಾಹನ ಚಾಲನೆಗೆ ಅನುಮತಿ ನೀಡಿದರು. ಈ ಸಮಾರಂಭದಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಬಿ ಭಿಮಳ್ಳಿ, ಕಾರ್ಯದರ್ಶಿ ಉದಯಕುಮಾರ್ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ ಬಿ ಪಾಟೀಲ್, ಸ್ಕೂಲ/ಕಾಲೇಜು ಆಫ್ ನರ್ಸಿಂಗನ ಸಂಚಾಲಕರಾದ ಡಾ. ನಾಗೇಂದ್ರ ಮಂಠಾಳೆ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಅರುಣಕುಮಾರ್ ಪಾಟೀಲ, ಡಾ. ರಜಿನಿಶ್ ವಾಲಿ, ಡಾ. ಮಹದೇವಪ್ಪ ರಾಂಪುರೆ, ಡಾ. ಶರಣಬಸಪ್ಪ ಹರವಾಳ, ಸಾಯಿನಾಥ ಪಾಟೀಲ್, ಡಾ. ಅನಿಲಕುಮಾರ ಪಟ್ಟಣ, ಸೋಮಶೇಖರ್ ಮರ್ಗೊಳ್, ಡಾ. ಕಿರಣ್ ದೇಶಮುಖ, ನಾಗಣ್ಣ s ಘಂಟಿ, ನಿಶಾಂತ ಎಲಿ, ಡಾ. ಗುರುಲಿಂಗಪ್ಪ ಪಾಟೀಲ್ ಹಾಗೂ ಸ್ಕೂಲ್/ಕಾಲೇಜು ಆಫ್ ನರ್ಸಿಂಗ್ ಡೀನ್ ಡಾ. ಪೂರ್ಣಿಮಾ, ಕಾಲೇಜು ಆಫ್ ನರ್ಸಿಂಗ್ ಪ್ರಾಂಶುಪಾಲರಾದ ಡಾ. ಮಹಾದೇವಪ್ಪ ಗೋದಿ, ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲ ಚೇತನ್ ಸಜ್ಜನ ಉಪಸ್ತಿತರಿದ್ದರು.