ಬಸವಣ್ಣನವರ ತತ್ವ ವಿಶ್ವಕ್ಕೆ ಮಾದರಿ – ಕುಂದೂರ ಮಠದ ಡಾ. ಶರಶ್ಚಂದ್ರ ಸ್ವಾಮೀಜಿ

ಬಸವಣ್ಣನವರ ತತ್ವ ವಿಶ್ವಕ್ಕೆ ಮಾದರಿ – ಕುಂದೂರ ಮಠದ ಡಾ. ಶರಶ್ಚಂದ್ರ ಸ್ವಾಮೀಜಿ
ಬಸವಣ್ಣನವರ ತತ್ವ ವಿಶ್ವಕ್ಕೆ ಮಾದರಿ – ಕುಂದೂರ ಮಠದ ಡಾ. ಶರಶ್ಚಂದ್ರ ಸ್ವಾಮೀಜಿ

ಬಸವಣ್ಣನವರ ತತ್ವ ವಿಶ್ವಕ್ಕೆ ಮಾದರಿ – ಕುಂದೂರ ಮಠದ ಡಾ. ಶರಶ್ಚಂದ್ರ ಸ್ವಾಮೀಜಿ

ಕಲಬುರಗಿ:ಸೆ.2. ಬಸವಣ್ಣನವರ ವಿಚಾರಗಳು ವಿಶ್ವಕ್ಕೆ ಮಾದರಿಯಾಗಿದ್ದು, ತನ್ನನ್ನು ತಾನು ಅರಿತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಮೂಲಕ ಬಸವ ತತ್ವದ ಅರಿವು ಮೂಡಿಸುವ ಅಗತ್ಯವಿದೆ ಎಂದು ಮೈಸೂರಿನ ಕುಂದೂರ ಮಠದ ಡಾ. ಶರಶ್ಚಂದ್ರ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.

ನಗರದ ಪೂಜ್ಯ ಬಸವರಾಜಪ್ಪ ಅಪ್ಪಾ ಸ್ಮರಣಾರ್ಥ ಭವನ ಸೆಂಟಿನರಿ ಹಾಲನಲ್ಲಿ ಬಸವ ಸಂಸ್ಕೃತಿ ಅಭಿಯಾನ ಕಾರ್ಯಕ್ರಮ ನಡೆಯಿತು.

ಸ್ತ್ರೀ ಸಮಾನತೆ, ಸಮಸಮಾಜ ನಿರ್ಮಾಣ, ಜನರಿಗೆ ಇಷ್ಟಲಿಂಗ ನೀಡಿದ ಮಹಾಪುರುಷ ಬಸವಣ್ಣರೆಂದು ಬೆಳಗಾವಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಗುರುದೇವಿ ಹುಲ್ಲೇಪ್ಪನವರು ಉಪನ್ಯಾಸ ನೀಡಿದರು.

ಬಸವಣ್ಣನವರ ಭಾವಚಿತ್ರ ದೆಹಲಿಯಿಂದ ಹಳ್ಳಿಗಳವರೆಗೂ ತಲುಪಿದ್ದು, ಮಠಾಧಿಪತಿಗಳು ಬಸವ ಸಿದ್ಧಾಂತಗಳನ್ನು ಯುವಪೀಳಿಗೆಗೆ ಮಾದರಿಯಾಗಿಸಬೇಕೆಂದು ಶಾಸಕ ಬಿ. ಆರ್. ಪಾಟೀಲ ಹೇಳಿದರು.

ಬಸವ ತತ್ವ ಮರೆಯಾಗದೇ ಉಳಿಯಲು ಬಸವಾದಿ ಶರಣ ಸಂಸ್ಕೃತಿ ಮತ್ತು ವಚನಗಳನ್ನು ಉಳಿಸಿ ಬೆಳೆಸಲು ಸಮಾಜ ಒಗ್ಗೂಡಿದರೆ ಸಾಧ್ಯವಿದೆ ಎಂದು ಸಚಿವ ಶರಣಪ್ರಕಾಶ ಪಾಟೀಲ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಜಗದ್ಗುರು ಸಾರಂಗದರ ದೇಸಿಕೇಂದ್ರ ಸ್ವಾಮೀಜಿ, ತೋಂಟದ ಸಿದ್ಧಲಿಂಗ ಸ್ವಾಮಿಗಳು, ಬಸವಲಿಂಗ ಪಟ್ಟದೇವರು ಮಾತನಾಡಿದ ಸರ್ಕಾರ ವಚನ ಸಾಹಿತ್ಯ ವಿಶ್ವ ವಿದ್ಯಾಲಯದ ಸ್ಥಾಪಿಸಬೇಕು ಎಂದು ಹೇಳಿದರು 

ಜಗದ್ಗುರು ಗಂಗಾಮಾತಾಜಿ, ಪಂಡಿತಾರಾಧ್ಯ ಶ್ರೀಗಳು, ಶಿವಾನಂದ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಯಡ್ರಾಮಿ ಸಿದ್ದಲಿಂಗ ಸ್ವಾಮೀಜಿ, ನೇಲೋಗಿ ಸಿದ್ದಲಿಂಗ ಸ್ವಾಮೀಜಿ, ಜೇರಟಗಿ ಮಹಾಂತ ಸ್ವಾಮೀಜಿ, ಅಕ್ಕಮಹಾದೇವಿ ಆಶ್ರಮದ ಪೂಜ್ಯ ಪ್ರಭುಶ್ರೀ ತಾಯಿ ಸೇರಿದಂತೆ ಅನೇಕ ಧಾರ್ಮಿಕ ಗಣ್ಯರು ಸಾನಿಧ್ಯ ವಹಿಸಿದ್ದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ, ಅಪ್ಪಾರಾವ ಅಕ್ಕೊಣಿ,ವಿಲಾಸವತಿ ಖುಬಾ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅರುಣಕುಮಾರ ಪಾಟೀಲ, ಸಮಿತಿ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಸ್ವಾಗತ ಭಾಷಣ ಮಾಡಿದರು. ಶ್ರೀಶೈಲ ಗೂಳಿ ನಿರೂಪಿಸಿದರು. ಎ.ಪಿ.ಎಂ.ಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರಭುಲಿಂಗ ಮಾಹಾಗಾಂವಕರ್, ಸಂಗಮೇಶ ನಾಗನಹಳ್ಳಿ, ಕಲ್ಯಾಣಪ್ಪ ಪಾಟೀಲ ಮಳಖೇಡ, ರಾಜಶೇಖರ ಯಂಕಂಚಿ, ಮಲ್ಲಿಕಾರ್ಜುನ್ ವಡ್ಡನಕೇರಿ, ಸಿದ್ದರಾಮಯ್ಯ ಯಳವಂತಗಿ, ಶರಣಗೌಡ ಪಾಟೀಲ ಪಾಳಾ, ಬಸವರಾಜ ಮರಬದ, ಅಯ್ಯಣ್ಣ ನಂದಿ, ಶಿವಶರಣಪ್ಪ ದೇಗಾಂವ, ಶಶಿಕಾಂತ ಪಸಾರ, ಉದಯಕುಮಾರ್ ಸಾಲಿ, ವೀರೇಶ ಮಾಲಿ ಪಾಟೀಲ, ಸತೀಶ ಸಜ್ಜನ್, ಸಿದ್ದಣ್ಣ ತಾವರಕೇಡ, ಆನಂದ್ ಸಿದ್ದಾಮಣಿ, ರೇವಣಸಿದ್ದಯ್ಯ, ಶಿವಕುಮಾರ್ ಧರ್ಮಗೊಂಡ, ಸಿದ್ದು ವಾಲಿ, ಆರ್.ಜಿ. ಸೆಟಗಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

-