ಬಾಳೆ ಕೃಷಿ ಲಾಭದಾಯಕವಾಗಲು ವೈಜ್ಞಾನಿಕ ತಾಂತ್ರಿಕತೆ ಅಳವಡಿಸಿ

ಬಾಳೆ ಕೃಷಿ ಲಾಭದಾಯಕವಾಗಲು ವೈಜ್ಞಾನಿಕ ತಾಂತ್ರಿಕತೆ ಅಳವಡಿಸಿ

ಬಾಳೆ ಕೃಷಿ ಲಾಭದಾಯಕವಾಗಲು ವೈಜ್ಞಾನಿಕ ತಾಂತ್ರಿಕತೆ ಅಳವಡಿಸಿ 

            ತೋಟಗಾರಿಕೆ ವಿಜ್ಜಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ಎ ಐ ಸಿ ಆರ್ ಪಿ ಹಣ್ಣು ವಿಭಾಗ ಅರಭಾವಿ, ರಾಯಚೂರು ಕೃಷಿ ವಿಶ್ವ ವಿದ್ಯಾಲಯ, ಕೃಷಿ ವಿಜ್ಜಾನ ಕೇಂದ್ರ ಕಲಬುರಗಿ ಜಂಟಿ ಯಾಗಿ ರೈತರಿಗೆ ಬಾಳೆ ಕೃಷಿ ಕುರಿತು ಸಮಗ್ರ ಪೋಷಕoಶ, ಕೀಟ ರೋಗ ನಿರ್ವಹಣೆ ಒಂದು ದಿನದ ತರಬೇತಿ ನಡೆಯಿತು. ಬಾಳೆ ಕೃಷಿ ವೈಜನಿಕವಾಗಿ ಅರಿತು ಮಾಡಿದಲ್ಲಿ, ಮೌಲವರ್ಧನ ಲಾಭ ಸಿಗಲಿದೆ ಎಂದು ಸಹ ಸಂಶೋಧನ ನಿರ್ದೇಶಕರಾದ ಡಾ. ತಂಬುರ್ನೆ ತಿಳಿಸಿದರು. ಬದಲಾಗುತ್ತಿರುವ ಹವಾಮಾನ,ಸ್ಥಳೀಯ ಮಾರುಕಟ್ಟೆ ಸೂಕ್ತ ತಳಿ ಬೆಳೆಯುವಂತೆ ಸಹ ವಿಸ್ತರಣ ನಿರ್ದೇಶಕರು ಡಾ. ಬಾಪು ಗೌಡ ದೊಡ್ಡಮನಿ ತಿಳಿಸಿದರು. ನೂತನ ಹೊಸ ಚಿಪ್ಸ್ ಯೋಗ್ಯ ತಳಿ ಪ್ಯಾಪಿಲ್ಲ ಬಾಳೆ ಕೃಷಿ ಕುರಿತು ಡಾ. ಯಲ್ಲೇಶ್ ಕುಮಾರ್, ಬಾಳೆ ಸೂಕ್ತ ಮಣ್ಣು, ವೈವಿದ್ಯತೆ ಕುರಿತು ಡಾ. ಸತೀಶ್ ಕಾಳೆ, ಹಣ್ಣುಗಳ ಮಹತ್ವ ಕುರಿತು ಪ್ರಧ್ಯಾಪಕರಾದ ಡಾ. ಶ್ರೀನಿವಾಸ್ ಎನ್.ಎಂ, ಯಶಸ್ವಿ ಬಾಳೆ ಕೃಷಿ ಯುಶೋಗತೆ ಮಾಹಿತಿಯನ್ನು ಕೀಟ ಪ್ರಧ್ಯಾಪಕ ಡಾ. ಸುನಿಲ್ ಕುಮಾರ್ ನೀಡಿದರು. ಕೆ ವಿ ಕೆ ಮುಖ್ಯಸ್ಥರದ ಡಾ. ರಾಜು ತೆಗ್ಗೆಲ್ಲಿ ನೂತನ ಬಾಳೆ ತಂತ್ರಜ್ಞಾನ ಸೂಕ್ತ ರೀತಿ ಅಳವಡಿಸಲು ಸಲಹೆ ನೀಡಿದರು. ಸಸ್ಯ ರೋಗ ತಜ್ಜರದ ಡಾ. ಪ್ರಶಾಂತ್ ಬಾಳೆ ಕೃಷಿ ಎಸ್ ಸಿ ಸ್ ಪಿ ಯೋಜನೆ ಪ್ರಾಸ್ತವಿಕ ಮಾಹಿತಿ ನೀಡಿದರು. ಡಾ. ಜಹೀರ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ಒಟ್ಟು 40 ಮಂದಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು. ರೈತರದ ಕಡಗಂಚಿ ಕಾಶೀನಾಥ್ ಚೆಂಗತೆ, ಬಾಬುರವ್, ವೀರಭದ್ರ ಇತರೆ ರೈತರು ಪ್ರಶ್ನಿನೋತ್ತರ ಕಾರ್ಯಕ್ರಮದಲ್ಲಿ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.