500 ಕೋಟಿ ಗಡಿ ದಾಟಿದ ಶಕ್ತಿ ಯೋಜನೆ : ಶಿವಶರಣರೆಡ್ಡಿ ಪಾಟೀಲ

500 ಕೋಟಿ  ಗಡಿ ದಾಟಿದ ಶಕ್ತಿ ಯೋಜನೆ : ಶಿವಶರಣರೆಡ್ಡಿ ಪಾಟೀಲ

500 ಕೋಟಿ ಗಡಿ ದಾಟಿದ ಶಕ್ತಿ ಯೋಜನೆ : ಶಿವಶರಣರೆಡ್ಡಿ ಪಾಟೀಲ

ಕಾಂಗ್ರೆಸ್ ಪಕ್ಷದ ಚುನಾವಣೆ ಪ್ರಳಾಕೆಯಲ್ಲಿ ಘೋಷಿಸಿರುವಂತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ಶಕ್ತಿ ಯೋಜನೆ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿಲಾಗಿದ್ದು, ಇಂದಿನ ದಿನಕ್ಕೆ ಬರೊಬ್ಬರಿ 500 ಕೋಟಿ ಟಿಕೆಟ್ ಗಡಿಯನ್ನು ಶಕ್ತಿ ಯೋಜನೆ ದಾಟುವ ಮೂಲಕ ದಾಖಲ ಬರೆದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸೇಡಂ ತಾಲೂಕಾಧ್ಯಕ್ಷ ಶಿವಶರಣ ರೆಡ್ಡಿ ಪಾಟೀಲ ಹೇಳಿದರು.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆ 500. ಕೋಟಿ ಗಡಿ ದಾಟಿದ ಸಂತಸದ ಗಳಿಗೆಯನ್ನು ಬಸ್ ಪೂಜೆ ನೆರವೇರಿಸಿ, ಸಿಹಿ ಹಂಚಿ ಆಚರಣೆ ಮಾಡಿ, ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಅನುಷ್ಠಾನಗೊಳಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ. ಅದರಲ್ಲೂ ಅತ್ಯಂತ ಜನಪ್ರಿಯ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಿಂದ ಮಹಿಳೆಯರು ದೂರದೂರುಗಳಿಗೆ ಉಚಿತ ಬಸ್ ಪ್ರಯಾಣ ಮಾಡುತ್ತಿದ್ದಾರೆ ಎಂದು ಅಭಿಲಾಷೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸೇಡಂ ತಾಲೂಕು ಬಸ್ ನಿಲ್ದಾಣದಿಂದ ಬೆಂಗಳೂರು ರಾಜಧಾನಿಗೆ ಗುರುಮಠಕಲ್ ವಾಯಾವಾಗಿ ಹೊರಡುವ ಬಸ್ ಗೆ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಲಾಯಿತು.

ಕಾರ್ಯಕ್ರಮದಲ್ಲಿ ಸಹಾಯಕ ಆಯುಕ್ತರಾದ ಪ್ರಭುರೆಡ್ಡಿ ಹಾಗೂ ಡಿಫೊ ಮ್ಯಾನೆಜ್‌ಮೆಂಟ್‌ , ಇಓ ಚನ್ನಪ್ಪ ರಾಯಣ್ಣನವರ್, ಗ್ಯಾರಂಟಿ ಸಮಿತಿ ಸದಸ್ಯರು, ಸಿಬ್ಬಂದಿಗಳು, ಮೇಲ್ವಿಚಾರಕರು, ಚಾಲಕರು, ನಿರ್ವಾಹಕರು ಉಪಸ್ಥಿತರಿದ್ದರು.