ಇಂದು ರಾಜರತನ್ ಅಂಬೇಡ್ಕರ್ ಆಗಮನ

ಇಂದು ರಾಜರತನ್ ಅಂಬೇಡ್ಕರ್ ಆಗಮನ
ಶಹಾಬಾದ್: 'ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದ ಅಂಗವಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ನಗರದ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಏ.22ರ ಸಂಜೆ 5ಗಂಟೆಗೆ ಭಾರತೀಯ ಬೌದ್ಧ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ರಾಜರತನ್ ಅಂಬೇಡ್ಕರ್ ಬೃಹತ್ ಬಹಿರಂಗ ಸಭೆ ಉದ್ದೇಶಿಸಿ
ಮಾತನಾಡಲಿದ್ದಾರೆ' ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಂಕರ ಅನ್ನೋಳಿ ಹಾಗೂ ಗೌರವ ಅಧ್ಯಕ್ಷ ಸುರೇಶ ಮೆಂಗನ ಹೇಳಿದರು.
ರಾತ್ರಿ 9ರ ನಂತರ ರಂಗವೃಕ್ಷಾ ನಾಟಕ ನೃತ್ಯ ಸೇವಾ ಸಂಘದಿಂದ ರಮಾಬಾಯಿ ಅಂಬೇಡ್ಕರ್ ನಾಟಕ ಪ್ರದರ್ಶನಗೊಳ್ಳಲಿದೆ. ಏ.23ರಂದು ಸಂಜೆ 4 ಗಂಟೆಗೆ ಬಸವೇಶ್ವರ ವೃತ್ತದಿಂದ ಅಂಬೇಡ್ಕರ್ ಪ್ರತಿಮೆವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಶಹಾಬಾದ್ ವರದಿ ನಾಗರಾಜ್ ದಂಡಾವತಿ