ಡಾ. ಮೀರಾಮಣಿ ಯವರಿಗೆ 2025ರ ರಾಷ್ಟ್ರೀಯ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ

ಡಾ. ಮೀರಾಮಣಿ ಯವರಿಗೆ 2025ರ ರಾಷ್ಟ್ರೀಯ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿ
ಬೆಂಗಳೂರಿನ ಜೈನ್ (ಡೀಮ್ಡ್-ಟು-ಬಿ ವಿಶ್ವವಿದ್ಯಾಲಯ ದ )ಗ್ರಂಥಪಾಲಕಿ ಡಾ. ಮೀರಾಮಣಿ ಯವರಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಗೆ ಅವರು ನೀಡಿದ ಮಹತ್ವದ ಕೊಡುಗೆಗಳನ್ನು ಗುರುತಿಸಿ ಮದ್ರಾಸ್ ಲೈಬ್ರರಿ ಅಸೋಸಿಯೇಷನ್, ಚೆನ್ನೈನ ಅಣ್ಣ ಸೆಂಟೇನರಿ ಗ್ರಂಥಾಲಯದಲ್ಲಿ ನಡೆದ ಭಾರತದ ಗ್ರಂಥಾಲಯ ವಿಜ್ಞಾನದ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್ ಅವರ 133 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರೋ.ಅರುಮುಗ,ಉಪಕುಲಪತಿ ,ತಮಿಳುನಾಡು ಮುಕ್ತ ವಿಶ್ವವಿದ್ಯಾಲಯ ,ಚೆನ್ನೈರವರು 2025ರ ರಾಷ್ಟ್ರೀಯ ಅತ್ಯುತ್ತಮ ಗ್ರಂಥಪಾಲಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿಶ್ವವಿದ್ಯಾಲಯದಲ್ಲಿ ವಿಶ್ವ ಪುರಾತತ್ವ ಕಾಂಗ್ರೆಸ್ (ಡಬ್ಲ್ಯೂಎಸಿ) ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು "ಭಾರತದಲ್ಲಿ ಸಾಂಸ್ಕೃತಿಕ ಪರಂಪರೆಯ ಡಿಜಿಟಲ್ ಸಂರಕ್ಷಣೆ: ಕರ್ನಾಟಕ ರಾಜ್ಯದಲ್ಲಿನ ಸಾಂಸ್ಥಿಕ ಸಂಗ್ರಹಗಳಿಗೆ ವಿಶೇಷ ಉಲ್ಲೇಖದೊಂದಿಗೆ" ಮತ್ತು "ಭಾರತದಲ್ಲಿ ಜಾನಪದ ಸಂಸ್ಕೃತಿ: ಆಚರಣೆಗಳು ಮತ್ತು ಆಧ್ಯಾತ್ಮಿಕ ಆಚರಣೆಗಳು" ಕುರಿತು ವಿದ್ವತ್ಪೂರ್ಣ ಪ್ರಬಂಧವನ್ನು ಮಂಡಿಸಿದ್ದಾರೆ.