ಕನ್ನಡ ಕಲಿತು ಬೆಳೆಸಿ ಉಳಿಸಿ: ಶ್ರೀಮತಿ ಶ್ರೀದೇವಿ ವಿ ಪಾಟೀಲ್ ಬೀದರ್
ಕನ್ನಡ ಕಲಿತು ಬೆಳೆಸಿ ಉಳಿಸಿ: ಶ್ರೀಮತಿ ಶ್ರೀದೇವಿ ವಿ ಪಾಟೀಲ್ ಬೀದರ್
ಬೀದರ ನ.27. ತಾಲ್ಲೂಕಿನ ಕಂಗನಕೋಟ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗ್ರಾಮಿಣ ಭಾಗದ ಶಾಲಾಯ ೬೯ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕನ್ನಡ ಭಾಷೆ,, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ತಿಳಿಸಲು ಆಯೋಜಿಸುವ ಈ ಕಾರ್ಯಕ್ರಮಕ್ಕೆ ಅಭಿನಂದನೆಗಳು, ಕೂಡ ಕನ್ನಡದಲ್ಲಿಯೇ ಓದಿ ಉದ್ಯೋಗ ಕನ್ನಡದಲ್ಲಿಯೇ ಹೆಚ್ಚಿನ ವಿದ್ಯಾಬ್ಯಾಸ ಮಾಡಬೇಕೆಂದು ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ರೀ ವಿಘ್ನೇಶ್ವರ ವಿ. ಶಿವಯೋಗಿ ಅವರು ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಂಗನಕೋಟದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿ಼ಶೇಷ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿಗಳಾದ ಶ್ರೀಮತಿ ಶ್ರೀದೇವಿ ವಿ. ಪಾಟೀಲ ಮಾತನಾಡಿ, ನಮ್ಮ ಭಾರತ ದೇಶ ಸ್ವಾತಂತ್ರ್ಯವಾದ ನಂತರ ಸಂವಿಧಾನ ಜಾರಿಗೆ ಬಂದು ಭಾಷಾವಾರು ಪ್ರಾಂತಗಳನ್ನು ರಚಿಸಿದಾಗ ಮೊದಲು ಮೈಸೂರು ಪ್ರಾಂತವೆಂದು ನಂತರ ಕರ್ನಾಟಕ ರಾಜ್ಯವೆಂದು ಮರು ನಾಮಕರಣವಾಯಿತು. ಅಂದಿನಿಂದ ಇಲ್ಲಿಯವರೆಗೆ ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಇಲ್ಲಿ ಆಳುವ ಭಾಷೆಯಾಗಿದೆ. ಆದ್ದರಿಂದ ನಾವೆಲ್ಲರೂ ಕನ್ನಡ ಭಾಷೆಯನ್ನು ಕಲಿತು ಬೆಳೆಸಿ ಉಳಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಮುಖಂಡರಾದ ಶ್ರೀ ಕಾಶಿನಾಥ ಬೆಲ್ದಾಳೆ ಅವರು ಮಾತನಾಡಿ, ಇಂದು ಸ್ಪರ್ಧಾತ್ಮಕ ಯುಗದಲ್ಲಿ ನಾವು ಹೆಚ್ಚು ಅಧ್ಯಯನಶೀಲರಾಗಬೇಕಾಗುತ್ತದೆ. ಇದಕ್ಕೆ ಪೋಷಕರು ಹೆಚ್ಚು ಒತ್ತು ನೀಡಬೇಕೆಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶ್ರೀ ಸಿದ್ಧಾರೂಢ ಭಾಲ್ಕೆ, ಶ್ರೀ ಅಶೋಕ ದಿಡಗೆ ಮತ್ತು ರಾಜ್ಯಮಟ್ಟದ ಯುವರತ್ನ ಪ್ರಶಸ್ತಿ ಪುರಸ್ಕೃರಾದ ಶ್ರೀ ಸಂಗಮೇಶ ಜಾಂತೆ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಕಂಗನಕೋಟ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀ ಸಂತೋಷ ತೋರಣ, ಮುಖ್ಯ ಗುರುಗಳಾದ ಶ್ರೀಮತಿ ಕವಿತಾ, ಶ್ರೀ ಅರವಿಂದ ಕುಲಕರ್ಣಿ, ಗ್ರಾಮದ ಮುಖಂಡರಾದ ಸುರೇಶ ಪಾಟೀಲ, ವಿರೇಶ ಶಂಭು, ಗಣಪತಿ ಶಂಭು, ಶಿವು ನೀಲಪ್ಪನೋರ, ಕಂಟು ಓತಿ, ಶಿಕ್ಷಕಿಯರಾದ ಶ್ರೀಮತಿ ಲಕ್ಷ್ಮಿ, ಶ್ರೀಮತಿ ರೇಖಾ, ಶ್ರೀಮತಿ ನಾಗಮ್ಮ, ಹಾಗೂ ಶಿಕ್ಷಕರಾದ ವಿಜಯಕುಮಾರ ಗೌರೆ, ಶ್ರೀ ಸಿದ್ರಾಮಪ್ಪ ಕಪಲಾಪೂರೆ ಮತ್ತು ಎಸ್.ಡಿ.ಎಂ.ಸಿ. ಸದಸ್ಯರುಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತಾಲೂಕು ಕಸಾಪ ಅಧ್ಯಕ್ಷರಾದ ಶ್ರೀ ಎಂ. ಎಸ್. ಮನೋಹರ ವಹಿಸಿದರು. ಅಕ್ಕಮಹಾದೇವಿ ಮಹಿಳಾ ಸಂಘದ ಸಂಗೀತಾ ಓತಿ, ಪುತಳಾಬಾಯಿ, ನಿರ್ಮಲಾ ಶಂಭು, ಜಾನಪದ ಗಾಯನ ನಡೆಸಿಕೊಟ್ಟರು.
ಮಕ್ಕಳಾದ ಕು, ತಸ್ಮೀಯಾ ಸಂವಿಧಾನ ಪೀಠಿಕೆ ಓದಿದರೆ, ಅನುಷ್ಕಾ ವಚನ ಗಾಯನ ಮಾಡಿದರು. ಇವರಿಗೆ ಪ್ರಮಾಣ ಪತ್ರ ನೀಡಲಾಯಿತು. ಪ್ರಾರಂಭದಲ್ಲಿ ಕನ್ನಡ ಮಾತೆ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಜ್ಯೋತಿ ಬೇಳುಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ನಂತರ ಮಕ್ಕಳಿಂದ ನಾಡಗೀತೆ ಮಾಡಲಾಯಿತು. ಪ್ರಾಸ್ತವಿಕವಾಗಿ ಸಿದ್ಧಾರೂಢ ಭಾಲ್ಕೆ ಮಾತನಾಡಿದರು, ಓಂಕಾರ ಪಾಟೀಲ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಶ್ರೀ ನಾಗರಾಜ ಬುಳ್ಳಾ, ಮಾಡಿದರು ಶಿಕ್ಷಕಿ ಶ್ರೀಮತಿ ಲಕ್ಷ್ಮೀ ಕೊನೆಯಲ್ಲಿ ವಂದಿಸಿದರು.
ವರದಿ : ಮಛಂದ್ರನಾಥ ಕಾಂಬ್ಳೆ ಬೀದರ್