ಜ್ಞಾನಗಂಗೆ ವಿಜಯವಿಟ್ಠಲ

ಜ್ಞಾನಗಂಗೆ ವಿಜಯವಿಟ್ಠಲ

ಜ್ಞಾನಗಂಗೆ

ವಿಜಯವಿಟ್ಠಲ

(ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ

 ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧಗಳ

ಸಂಕಲನ)

 ಈ ಸಂಕಲನದಲ್ಲಿ ಶ್ರೇಷ್ಠ ಹರಿದಾಸರಾದ ಶ್ರೀವಿಜಯದಾಸರುದಾಸಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಕೊಡುಗೆಗಳ ಬಗ್ಗೆ,ಅವರು ಸಂಚಾರಮಾಡುತ್ತಾ ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆ ಬಂದಾಗ ಅವರು ಬಣ್ಣಿಸಿರುವ ಉಡುಪಿ,ಅಲ್ಲಿರುವ ಮಧ್ವಸರೋವರ,ಪಾಜಕಕ್ಷೇತ್ರ,ಅವರು ರಚಿಸಿರುವ ಸುಳಾದಿಗಳು ಮತ್ತು ಅವರ ಕೃತಿಗಳಲ್ಲಿ ಬೋಧಿಸಿರುವ ನೀತಿ,ಇವೆಲ್ಲವುಗಳ ಸಾಹಿತ್ಯದ ಸೊಬಗು ಈ ಪುಸ್ತಕದಲ್ಲಿದೆ.ಒಟ್ಟು 280ಪುಟಗಳನ್ನು ಹೊಂದಿರುವ ಈ ಪುಸ್ತಕ ಶ್ರೀಕೃಷ್ಣದೇವರ ಚಿತ್ರದೊಂದಿಗೆ ಶ್ರೀವಿಜಯದಾಸರು ಭಕ್ತಿಯಿಂದ ನಿಂತಿರುವ ಮುಖಪುಟ ಬಹಳ ಸುಂದರವಾಗಿ ಮತ್ತುಆಕರ್ಷಣೀಯವಾಗಿದೆ.

ಈ ಗ್ರಂಥದ ಪ್ರಧಾನಸಂಪಾದಕರಾದ ಡಾ.ಬಿ.ಗೋಪಾಲಾಚಾರ್ಯರು ,ಇವರ ನೇತೃತ್ವದಲ್ಲಿ ಗ್ರಂಥವು ಬಹಳ ಸುಂದರವಾಗಿ ಹೊರಬರಲು ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿದ್ದಾರೆ.

ಸಂಪಾದಕರಾಗಿ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಇವರು

ಈ ಗ್ರಂಥವನ್ನು ಹೊರತರುವಲ್ಲಿ ಬಹಳಶ್ರಮವಹಿಸಿದ್ದಾರೆ. ಬಹಳ ಅತ್ಯಲ್ಪ ಸಮಯದಲ್ಲಿ ಬಂದಿರುವ ಪ್ರಬಂಧಗಳನ್ನೆಲ್ಲಾ ಜೋಡಿಸಿ,ಒಂದು ಪುಸ್ತಕ ರೂಪದಲ್ಲಿ ತಂದಿರುವುದು ಅವರಿಗೆ ಹರಿದಾಸರುಗಳ ಮೇಲಿರುವ ಭಕ್ತಿ ಮತ್ತು ಗೌರವ ಎಷ್ಟು ಆಳವಾಗಿದೆಯೆಂದು ತಿಳಿಯುತ್ತದೆ.ಪುಸ್ತಕದಲ್ಲಿನ ಲೇಖನಗಳು ಶ್ರೀವಿಜಯದಾಸರ ಹಾಗೂ ಉಡುಪಿ ಕ್ಷೇತ್ರ ದರ್ಶನದ ದಿವ್ಯದರ್ಶನದಂತಿರುವುದಾಗಿದೆ.ಕ್ಷೇತ್ರ,ಕ್ಷೇತ್ರದ ಹೆದ್ದೈವನಾದ ಶ್ರೀಮದಾನಂದತೀರ್ಥರಿಂದ ಪ್ರತಿಷ್ಠಿತ

ಮುದ್ದು ಕೃಷ್ಣನ,ಕ್ಷೇತ್ರಗಳ ವಿಶೇಷಗಳ ಬಗ್ಗೆ ಶ್ರೀವಿಜಯದಾಸರ ಕೃತಿಗಳ ಮೂಲಕ ವಿಶೇಷವಾಗಿ ವಿಶ್ಲೇಷಿಸಲಾಗಿದೆ. ಹೀಗೆ ಅನೇಕ ತಿಳಿಯಬೇಕಾದ ವಿಷಯಗಳಿಂದ ಕೂಡಿದ ಈ ಗ್ರಂಥವು ಎಲ್ಲರಿಗೂ ಆದರಣೀಯವಾದುದಾಗಿದೆ,ಆಸ್ವಾದಿಸಬೇಕಾದುದಾಗಿದೆ. ಇಂತಹ ಉತ್ಕ್ರೃಷ್ಟವಾದ ಗ್ರಂಥವನ್ನು ಪರ್ಯಾಯ ಪೀಠದಲ್ಲಿ ವಿರಾಜಮಾನರಾಗಿರುವ ಪರಮ ಪೂಜ್ಯಶ್ರೀ ಶ್ರೀಸುಗುಣೇಂದ್ರತೀರ್ಥ ಶ್ರೀಪಾದಂಗಳವರ ಅಮೃತಹಸ್ತದಿಂದ ಬಿಡುಗಡೆ ಗೊಂಡಿದೆ. ಶ್ರೀನಿವಾಸ ಉತ್ಸವ ಬಳಗದ ಕಾರ್ಯ ಶ್ಲಾಘನೀಯವಾದದ್ದು.

ಕೃತಿ:ವಿಜಯ ವಿಟ್ಠಲ( ಹರಿದಾಸ ಸಾಹಿತ್ಯ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಮಂಡಿಸಿದ ಪ್ರಬಂಧ ಸಂಕಲನ)

ಪ್ರಕಾಶಕರು:ಶ್ರೀವಾದಿರಾಜ ಸಂಶೋಧನಾ ಪ್ರತಿಷ್ಠಾನ,

                   ಶ್ರೀಪುತ್ತಿಗೆಮಠ,ಉಡುಪಿ

ಸಂಪಾದಕರು..ಡಾ.ಗುರುರಾಜ ಪೋಶೆಟ್ಟಿಹಳ್ಳಿ

                         ಮಾಧ್ಯಮ ಸಮನ್ವಯಕಾರರು

                                  ಬೆಂಗಳೂರು 9739369621

  ಮೊದಲಮುದ್ರಣ....2024

                     ಪುಟ....280

                     ಬೆಲೆ......ರೂ. 200/-

- ಎನ್. ಜೈಭೀಮಾ ಜೋಯಿಸ್,ಶಿವಮೊಗ್ಗ 

-