ಶರಣನಗರದಲ್ಲಿ ಸಿಟಿ ಲೈಟ್ ಅಳವಡಿಕೆ – ಪುರಸಭೆ ಸದಸ್ಯ ಲಕ್ಷ್ಮಣ್ ಜಳಕಿಕರ್ ಸನ್ಮಾನ
ಶರಣನಗರದಲ್ಲಿ ಸಿಟಿ ಲೈಟ್ ಅಳವಡಿಕೆ – ಪುರಸಭೆ ಸದಸ್ಯ ಲಕ್ಷ್ಮಣ್ ಜಳಕಿಕರ್ ಸನ್ಮಾನ
ಆಳಂದ : ಶರಣನಗರ ಬಡಾವಣೆಯ ಪ್ರಮುಖ ಬೇಡಿಕೆಯಾದ ಸಿಟಿ ಲೈಟ್ ಅಳವಡಿಕೆಯನ್ನು ಈಡೇರಿಸಿದ ಪುರಸಭೆ ಸದಸ್ಯ ಲಕ್ಷ್ಮಣ್ ಜಳಕಿಕರ್ ಅವರ ಅಭಿವೃದ್ದಿ ಕಾರ್ಯವನ್ನು ಶ್ಲಾಘಿಸಿ ಸ್ಥಳೀಯ ನಿವಾಸಿಗಳು ಭಾನುವಾರ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ್ ಕರ್ ಅವರು, “ಶರಣನಗರದ ಮುಖ್ಯ ರಸ್ತೆಯಲ್ಲಿ ಹಲವು ವರ್ಷಗಳಿಂದ ಬೆಳಕಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿತ್ತು. ಪುರಸಭೆ ಸದಸ್ಯರ ಶ್ರಮದಿಂದ ಈ ಕನಸು ನನಸಾಗಿದೆ. ಬಡಾವಣೆಯ ಪರವಾಗಿ ಪುರಸಭೆ ಸದಸ್ಯ ಲಕ್ಷ್ಮಣ್ ಜಳಕಿಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು” ಎಂದರು.
ಕಾರ್ಯಕ್ರಮದಲ್ಲಿ ಸಿದ್ರಾಮ ಸನ್ಮುಖ ವಿರೇಶ ರೊಟ್ಟೆ, ಮಲ್ಕಣ್ಣ ಪಗಡೆ, ಹನುಮಂತ ಪಗಡೆ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಈಶ್ವರ ಕಲ್ಲೂರೆ, ಭೀಮಾ ಆಲ್ಮದ್, ಮಂಜು ಪೊದ್ದಾರ, ನಿಜಗುಣ ಬುಳ್ಳಾ, ಚಂದ್ರು ಜಂಗ್ಲೆ, ಕಿರಣ ಅಲ್ಮದ, ಗುರುನಾಥ ಅಷ್ಟಗಿ, ಪ್ರಶಾಂತ್ ಕರ್, ಅನಿಲ್ ಗೋಳೆ, ಸಿದ್ದು ಯಳಸಂಗಿ, ಮಹೇಶ್ ನಂದಿಕೋಲೆ ಮುಂತಾದವರು ಹಾಜರಿದ್ದರು.
ವರದಿ : ಡಾ. ಅವಿನಾಶ ಎಸ್. ದೇವನೂರ
--