ಇಂಡಿಯಾ ಬುಕ್ ಆಫ್ ರಿಕಾರ್ಡ ಪ್ರಶಸ್ತಿ ದಾನೇಶ್ವರಿ ವಾರಕರ್

ಇಂಡಿಯಾ ಬುಕ್ ಆಫ್ ರಿಕಾರ್ಡ ಪ್ರಶಸ್ತಿ ದಾನೇಶ್ವರಿ ವಾರಕರ್

ಇಂಡಿಯಾ ಬುಕ್ ಆಫ್ ರಿಕಾರ್ಡ ಪ್ರಶಸ್ತಿ ದಾನೇಶ್ವರಿ ವಾರಕರ್

ಶಹಾಬಾದ: ತಾಲೂಕಿನ ಹೊನಗುಂಟಿ ಗ್ರಾಮದ ದಾನೇಶ್ವರಿ ವಾರಕರ್ 'ಹರಿಯಾಣ ರಾಜ್ಯದ ಇಂಡಿಯಾ ಬುಕ್. ಆಫ್ ರಿಕಾರ್ಡಗೆ ಭಾಜನರಾಗಿದ್ದಾಳೆ. ಇತ್ತೀಚೆಗೆ ಮನೆಯಲ್ಲಿ ಕುಳಿತು ಸ್ವಂತ: ರಚನೆಯ ಹಿಂದಿ ಕವನಗಳನ್ನು ಕೇವಲ 60 ನಿಮಿಷದಲ್ಲಿ 30 ಕವನಗಳನ್ನು ಬರೆದು ದಾಖಲೆ ಮಾಡಿದ್ದಾಳೆ, ಈ ಕವನಗಳನ್ನು ನಿಗದಿತ ಸಮಯಕ್ಕೆ ವಿಡಿಯೋ ರಿಕಾರ್ಡ ಮೂಲಕ ಕವನವನ್ನು ಬರೆದು ಕಳುಹಿಸಲಾಗಿತ್ತು. ಅದನ್ನು ಪ್ರಶಸ್ತಿ ವಿತರಕರು 7 ದಿನಗಳ ಕಾಲ ಸೂಕ್ತ ಪರಿಶೀಲನೆ ನಡೆಸಿ, ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪೋಸ್ಟ್ ಮೂಲಕ ಪ್ರಶಸ್ತಿ ಪತ್ರಗಳನ್ನು ಕಳುಹಿಸಿದ್ದಾರೆ. ದಾನೇಶ್ವರಿ ಕಲಬುರಗಿಯ ಶ್ರೀಗುರು ಕಾಲೇಜಿನಲ್ಲಿ ಪಿಯುಸಿ ದ್ವಿತೀಯ ವರ್ಷ ಓದುತ್ತಿದ್ದಾಳೆ. ದಾನೇಶ್ವರಿಯ ಸಾಧನೆಗೆ ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಶ್ಲಾಘಿಸಿದ್ದಾರೆ.

ಶಹಾಬಾದ್ ಸುದ್ದಿ ನಾಗರಾಜ್ ದಂಡಾವತಿ