ವಸತಿ ನಿಲಯಗಳ ಮೇಲೆ ಅಧಿಕಾರಿಗಳ ನಿಗಾ ವಹಿಸಲಿ

ವಸತಿ ನಿಲಯಗಳ ಮೇಲೆ ಅಧಿಕಾರಿಗಳ ನಿಗಾ ವಹಿಸಲಿ
ಶಹಾಪುರ :ತಾಲೂಕಿನಲ್ಲಿರುವ ಬಾಲಕಿಯರ ವಸತಿ ನಿಲಯಗಳ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕೆಂದು ದಲಿತ ಮುಖಂಡ ಮಲ್ಲಿಕಾರ್ಜುನ್ ನಾಟೆಕರ್ ಹತ್ತಿಗೂಡೂರು ಆಗ್ರಹಿಸಿದ್ದಾರೆ.
ಇತ್ತೀಚೆಗೆ ನಗರದ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯೊಬ್ಬಳ ಹೆರಿಗೆ ಪ್ರಕರಣದ ಹಿನ್ನೆಲೆಯಲ್ಲಿ ಇಂತಹ ಘಟನೆಯನ್ನು ಇನ್ನೊಮ್ಮೆ ಮರುಕಳಿಸದಂತೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬಡ ಹೆಣ್ಣು ಮಕ್ಕಳಿಗಾಗಿ ಅಭ್ಯಾಸದ ಹಿತದೃಷ್ಟಿಯಿಂದ ಸರಕಾರ ಇಂತಹ ವಸತಿ ಶಾಲೆಗಳು ಪ್ರಾರಂಭಿಸಿದೆ, ಆದರೆ ಇಂಥ ಘಟನೆ ಜರುಗಿರುವುದು,ನಮಗೆ ತುಂಬಾ ಬೇಸರ ತಂದಿದೆ,ಆದರೆ ಮಕ್ಕಳು ಈ ಶಾಲೆಯಲ್ಲಿ ಬಿಡುವುದಕ್ಕೆ ಪಾಲಕರು ಆತಂಕ ಪಡುವಂತ ವಾತಾವರಣ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.