ಪಾಲಿಕೆ ನೂತನ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ ಗೆ ಹೋಟೆಲ್ ಸಂಘದಿಂದ : ಅಭಿನಂದನೆ

ಪಾಲಿಕೆ ನೂತನ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ ಗೆ ಹೋಟೆಲ್ ಸಂಘದಿಂದ : ಅಭಿನಂದನೆ

ಪಾಲಿಕೆ ನೂತನ ಉಪ ಆಯುಕ್ತರಾದ ಪ್ರಮೀಳಾ ಎಂ.ಕೆ ಗೆ ಹೋಟೆಲ್ ಸಂಘದಿಂದ : ಅಭಿನಂದನೆ

ಕಲಬುರಗಿ: ಮಹಾನಗರ ಪಾಲಿಕೆ ಕಲಬುರಗಿ ಇದರ ನೂತನ ಡೆಪ್ಯುಟಿ ಕಮಿಷನರ್ ಆಗಿ ಗುರುವಾರ (ಜೂನ್19)ರಂದು ಅಧಿಕಾರ ಸ್ವೀಕರಿಸಿದ ಶ್ರೀಮತಿ ಪ್ರಮೀಳಾ ಎಂ. ಕೆ ಅವರಿಗೆ ಕಲಬುರಗಿ ಜಿಲ್ಲಾ ಹೋಟೆಲ್, ಬೇಕರಿ ಮತ್ತು ವಸತಿ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ನೇತೃತ್ವದಲ್ಲಿ ಹೂಗುಚ್ಛ ನೀಡಿ ಸನ್ಮಾನಿಸಲಾಯಿತು.

ಆಯ್ಕೆ ಶ್ರೇಣಿಯ ಹಿರಿಯ ಕೆಎಎಸ್ ಅಧಿಕಾರಿಯಾಗಿ ಜೆಸ್ಕಾಂ ವ್ಯವಸ್ಥಾಪಕರು, ಕೆಕೆ ರ್‌ಡಿಬಿ ಉಪ ಕಾರ್ಯದರ್ಶಿ ಜಿಮ್ಸ್ ಆಡಳಿತ ಅಧಿಕಾರಿಯಾಗಿ ಹಲವು ಹುದ್ದೆಗಳನ್ನು ನಿರ್ವಹಿಸಿ ಅನುಭವ ಹೊಂದಿದ ಪ್ರಮೀಳಾ ಅವರು ಪ್ರಾಮಾಣಿಕ ಅಧಿಕಾರಿಯಾಗಿ ಹೆಸರುಗಳಿಸಿದವರು. ಇವರ ಸೇವೆಯಿಂದ ಕಲಬುರಗಿ ಮಹಾನಗರ ಪಾಲಿಕೆಗೆ ಕೀರ್ತಿ ಬರಲಿ ಎಂದು ಈ ಸಂದರ್ಭದಲ್ಲಿ ನರಸಿಂಹ ಮೆಂಡನ್ ಶುಭ ಹಾರೈಸಿದರು. ಹೋಟೆಲ್ ಅಸೋಸಿಯೇಷನ್ ಪದಾಧಿಕಾರಿಗಳಾದ ಮಹಾಕೀರ್ತಿ ಶೆಟ್ಟಿ ಹಾಗೂ ಸುನಿಲ್ ಶೆಟ್ಟಿ ಉಪಸ್ಥಿತರಿದ್ದರು.