ಗೃಹ ಸಚಿವ ಜಿ.ಪರಮೇಶ್ವರ 74ನೇ ಹುಟ್ಟುಹಬ್ಬ ಆಚರಣೆ

ಗೃಹ ಸಚಿವ ಜಿ.ಪರಮೇಶ್ವರ 74ನೇ ಹುಟ್ಟುಹಬ್ಬ ಆಚರಣೆ

ಗೃಹ ಸಚಿವ ಜಿ.ಪರಮೇಶ್ವರ 74ನೇ ಹುಟ್ಟುಹಬ್ಬ ಆಚರಣೆ

ಕಲಬುರಗಿ: ನಗರದ ಸೈಯದ ಚಿಂಚೋಳಿ ರಸ್ತೆಯಲ್ಲಿರುವ ವೃದ್ದಾಶ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ ರವರ 74ನೇ ಜನ್ಮದಿನದ ಪ್ರಯುಕ್ತ ವಯೋವೃದ ಆಶ್ರಮದಲ್ಲಿ ಅಖಿಲ ಕರ್ನಾಟಕ ಡಾ.ಜಿ ಪರಮೇಶ್ವರ ಯುವ ಸೈನ್ಯ ಕಲ್ಯಾಣ ಕರ್ನಾಟಕ ಅಧ್ಯಕ್ಷ ಸೈದಪ್ಪಾ ಡಾಂಗೆ ನೇತೃತ್ವದಲ್ಲಿ ವಯೋವೃದರಿಗೆ ಅನ್ನ ಸಂತರ್ಪಣೆ,ಹಣ್ಣುಹಂಪಲು,ಹಾಗೂ ಬೆಡ್ ಶೀಠ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

                ನಂತರ ಮಾತನಾಡಿದ ಯುವ ಸೈನ್ಯದ ಕಲ್ಯಾಣ 

ಕರ್ನಾಟಕ ಅಧ್ಯಕ್ಷ ಸೈದಪ್ಪಾ ಡಾಂಗೆ ಮಾತನಾಡಿ,ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳು, ಕೊರಟಗೆರೆ ಕ್ಷೇತ್ರದ ಶಾಸಕರೂ ಆಗಿರುವ ಡಾ.ಜಿ.ಪರಮೇಶ್ವರ್ ಓರ್ವ ಸಜ್ಜನ ರಾಜಕಾರಣಿ,ತಮ್ಮ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿ, ಅವರು ಬದುಕು ಕಟ್ಟಿಕೊಳ್ಳಲ ನೆರವಾಗಿದ್ದಾರೆ.ಐದು ಭಾರಿ ಶಾಸಕರಾಗಿ, ಅನೇಕ ಬಾರಿ ಸಚಿವರಾಗಿ ಕೆಲಸ ಮಾಡಿದ ಡಾ.ಜಿ.ಪರಮೇಶ್ವರ,ಉನ್ನತ ಶಿಕ್ಷಣ ಸಚಿವರಾಗಿದ್ದ ಕಾಲದಲ್ಲಿ ತುಮಕೂರು ಜಿಲ್ಲೆಗೆ ವಿಶ್ವವಿದ್ಯಾಲಯವೊಂದು ಮಂಜೂರು ಮಾಡುವ ಮೂಲಕ, ಕಲ್ಪತರು ನಾಡು,ಶಿಕ್ಷಣ ನಗರಿಯಾಗಿ ಪರಿವರ್ತನೆಗೊಳ್ಳಲು ಕಾರಣರಾಗಿದ್ದಾರೆ. ಅಂತಹವರು ಇನ್ನೂ ಹತ್ತಾರು ವರ್ಷಗಳ ಕಾಲ ಬದುಕಿ,ರಾಜಕೀಯ ಕ್ಷೇತ್ರದಲ್ಲಿ ಮತ್ತಷ್ಟು ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮತ್ತಷ್ಟು ಬಡವರಿಗೆ ನೆರವು ನೀಡುವಂತಾಗಲಿ ಎಂದು ಶುಭ ಹಾರೈಸುವುದಾಗಿ ತಿಳಿಸಿದರು.ಸಜ್ಜನ ರಾಜಕಾರಣಿ ಎಂದೇ ರಾಜಕೀಯ ವಲಯದಲ್ಲಿ ಕರೆಯಲ್ಪಡುವ ಡಾ.ಜಿ.ಪರಮೇಶ್ವ‌ರ್ ಅವರು ಕಾಂಗ್ರೆಸ್‌ ಪಕ್ಷಕ್ಕಾಗಿ ಹಗಲರುಳೆನ್ನದೆ ದುಡಿದಿದ್ದಾರೆ.ಅವರ ಸೇವೆಯನ್ನು ಪಕ್ಷ ಗುರುತಿಸಿ,2023ರ ವಿಧಾನಸಭಾ ಚುನಾವಣೆಯ ಪ್ರಾಣಾಳಿಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದೆ.ಮುಂದಿನ ದಿನಗಳಲ್ಲಿ ಡಾ.ಜಿ ಪರಮೇಶ್ವರ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿ ಎಂಬುವುದು ನಮ್ಮ ಆಶಯವಾಗಿದೆ ಎಂದು ಅವರು ಮಾತನಾಡಿದರು.

           ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಸಂಜುಕುಮಾರ ಜವಾಳಕರ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಓಂಕಾರ ವಠಾರ,ಗ್ರಾಮ ಸದ್ಯಸರಾದ ವಿಠ್ಠಲ ಗೌಳಿ, ಅಂಬರಾಯ ಕಾಂಬಳೆ, ಮಲ್ಲಿಕಾರ್ಜುನ ಏಕಲ್ಲೂರ, ನಿಂಗಣ್ಣ ಪೂಜಾರಿ, ಅನೀಲ ಬೋಸ್ಗಾ, ಶಶಿಕಾಂತ ಬೋಸ್ಗಾ, ಮತ್ತು ಯುವ ಸೈನ್ಯ ಪದಾಧಿಕಾರಿಗಳು ಕಾಂಗ್ರೆಸ್ ಮುಖಂಡರು ಯುವಕರು ಅಭಿಮಾನಿಗಳು ಸೇರಿದಂತೆ ಇತರರು ಹಾಜರಿದ್ದರು.