ಮಳೆರಾಯನ ಅಬ್ಬರಕ್ಕೆ ನೆಲಕ್ಕುರುಳಿದ ಬಾಳೆ ಗಿಡಗಳು – ರೈತರಿಗೆ ಲಕ್ಷಾಂತರ ನಷ್ಟ

ಮಳೆರಾಯನ ಅಬ್ಬರಕ್ಕೆ ನೆಲಕ್ಕುರುಳಿದ ಬಾಳೆ ಗಿಡಗಳು – ರೈತರಿಗೆ ಲಕ್ಷಾಂತರ ನಷ್ಟ
ಆಳಂದ, ಮೇ 12: ತಾಲ್ಲೂಕಿನ ಮಾಡಿಯಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಬಾಳೆ ಬೆಳೆ ಹಾಳಾಗಿದೆ , ಶ್ರೀ ಸಂಗಣ್ಣ ಸಿದ್ದಪ್ಪ ಉಪ್ಪಿನ ಅವರ ಹೊಲದಲ್ಲಿನ ಬಾಳೆ ಗಡಗಳು ನೆಲಕ್ಕುರುಳಿವೆ. ಸುಮಾರು 2 ರಿಂದ 3 ಲಕ್ಷ ರೂಪಾಯಿಗಳಷ್ಟು ಬೆಳೆ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ಈ ಭೀಕರ ಹಾನಿಯಿಂದ ಮನಸ್ಸುಮುರಿದ ರೈತರು ಕಣ್ಣೀರಿಟ್ಟು ಪರಿಹಾರಕ್ಕೆ ಮನವಿ ಮಾಡಿಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಸಂಬಂಧಪಟ್ಟ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ** ನಡೆಸಿದ್ದಾರೆ. ಕೃಷಿಕರು ಸರಕಾರದಿಂದ ತುರ್ತು ಪರಿಹಾರ ಮತ್ತು ಬೆಳೆ ವಿಮಾ ಅನುಕೂಲಕ್ಕಾಗಿ ಆಗ್ರಹಿಸುತ್ತಿದ್ದಾರೆ.
– ವರದಿ: ಡಾ. ಅವಿನಾಶ್ ಎಸ್. ದೇವನೂರ