ಅರುವಿನಲ್ಲಿ ಆಚಾರವಿರಬೇಕು

ಅರುವಿನಲ್ಲಿ ಆಚಾರವಿರಬೇಕು
ಆಚಾರದಲ್ಲಿ ಅರಿವು ತುಂಬಿರಬೇಕು, ಅರಿವು ಮತ್ತು ಆಚಾರಗಳ ಸಂಗಮವೇ ನಿಜವಾದ ವೀರಶೈವ ತತ್ವದ ಬೋಧೆಯಾಗಿದೆ.
ಸದುವಿನಯ, ಸದಾಚಾರ, ಸದ್ಭಕ್ತಿಯಿಂದ ಗುರುವಿನ ನಾಮಸ್ಮರಣೆ ಮಾಡಿದರೆ, ಸದ್ಗುರುನಾಥ ಸದಾ ಕಾಲ ನಮ್ಮನ್ನು ರಕ್ಷಾಕಚವಾಗಿ ರಕ್ಷಿಸುತ್ತಾನೆ.
ನಮಗೆ ಬಂದ ರೋಗ ವೈದ್ಯ ದೂರು ಮಾಡಿದರೆ, ಭವರೋಗವನ್ನು ಕಳೆಯುವ ಮಹಾ ವೈದ್ಯನೇ ಗುರು.
ಅದಕ್ಕಾಗಿಯೇ ಮಹಾತ್ಮ ಬಸವೇಶ್ವರರು "ಶಿವ ಪಥವನರಿವೊಡೆ ಗುರು ಪಥವೇ ಮೊದಲು" ಎಂದು ಹೇಳಿದ್ದಾರೆ.
ಶ್ರೀ ಅಲ್ಲಮಪ್ರಭುಗಳು ತಮ್ಮ ಅನುಭಾವದ ವಚನದಲ್ಲಿ ಹೀಗೆ ಹೇಳಿದ್ದಾರೆ, "ಒಂದು ಕೋಟಿ ವರುಷ ಷೋಡಸ ದಾನಂಗಳ ಮಾಡಿದ ಫಲವು, ಒಂದು ದಿನ ಸದ್ಧರ್ಮ ಶಿವಯೋಗಿಗೆ ತೃಪ್ತಿಯ ಮಾಡಿದುದಕ್ಕೆ ಸರಿಯಲ್ಲ ನೋಡಾ" ಎಂದು ಹೇಳಿದ್ದಾರೆ.