ನಂದೂರ ಬಿ ಸಹಕಾರ ಸಂಘದಿಂದ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಗೆ ಪ್ರತಿನಿಧಿ ಆಯ್ಕೆ
ನಂದೂರ ಬಿ ಸಹಕಾರ ಸಂಘದಿಂದ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಗೆ ಪ್ರತಿನಿಧಿ ಆಯ್ಕೆ
ಕಲಬುರಗಿ :30, ಕಲಬುರಗಿ ತಾಲೂಕಿನ ನಂದೂರ ಬಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ 2025ನೇ ಸಾಲಿನ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಚುನಾವಣೆಗೆ ನಿರ್ದೇಶಕ ಸೈಯದ್ ಅಕ್ಬರ್ ಹುಷೇನಿ ಅವರನ್ನು ಪ್ರತಿನಿಧಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ಸಂದರ್ಭ ರಾಜಕೀಯ ಮುಖಂಡರು ಪರೋಕ್ಷವಾಗಿ ಭಾಗವಹಿಸಿದ್ದರೂ, ಸಂಘದ ನಿರ್ದೇಶಕರು ಎಲ್ಲರೂ ಪಕ್ಷಾತೀತವಾಗಿ ರೈತರ ಹಾಗೂ ಸಂಘದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಂಡರು. ವಿಶೇಷವಾಗಿ, ಈ ಸಂಘದಲ್ಲಿ ಅಲ್ಪಸಂಖ್ಯಾತ ಸಮುದಾಯದ ಏಕೈಕ ನಿರ್ದೇಶಕರಾಗಿರುವ ಅಕ್ಬರ್ ಹುಷೇನಿ ಅವರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡುವ ಮೂಲಕ ಸಮಾಜದಲ್ಲಿ ಸಾಮರಸ್ಯ ಹಾಗೂ ಜಾತ್ಯತೀತ ಬಾಂಧವ್ಯ ಬಲಪಡಿಸುವ ಸಂದೇಶ ನೀಡಲಾಯಿತು.
ಸಭೆಯಲ್ಲಿ ರೈತರ ತೊಗರಿ ಶೇಖರಣೆಗಾಗಿ ಗೋದಾಮು ನಿರ್ಮಾಣದ ಅಗತ್ಯತೆ ಹಾಗೂ ಅದರ ವೆಚ್ಚ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಅಧ್ಯಕ್ಷ ಶಿವಯೋಗಪ್ಪ ನಾಟಿಕಾರ, ಉಪಾಧ್ಯಕ್ಷೆ ಸತ್ಯಮ್ಮ ಪಾಟೀಲ ಪಾಳಾ, ನಿರ್ದೇಶಕರಾದ ಉಮಾಪತಿ ಪಾಟೀಲ, ಬಸವರಾಜ ಪಾಟೀಲ, ಶಿವಾನಂದ್ ಪಾಳಾ, ಶಿವಶರಣಪ್ಪ ಬರಗಲಿ, ಪಾಂಡು ಆಡೆ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರತಿನಿಧಿಯಾಗಿ ಆಯ್ಕೆಯಾದ ಸೈಯದ್ ಅಕ್ಬರ್ ಹುಷೇನಿ ಮಾತನಾಡಿ –ಈ ಹಿಂದೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ವ್ಯಾಪ್ತಿಯ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿರುವೆ ತೃಪ್ತಿ ನನಗಿದೆ. ತಾವು ವಹಿಸಿಕೊಟ್ಟ ಅಧಿಕಾರವನ್ನು ಸದುಉಪಯೋಗ ಪಡೆದುಕೊಂಡು “ಜಿಲ್ಲಾ ಸಹಕಾರ ಸಂಘದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕಾರ್ಯ ಮಾಡುತ್ತೇನೆ” ಎಂದು ಭರವಸೆ ನೀಡಿದರು.
ನಂತರ ಎಲ್ಲಾ ನಿರ್ದೇಶಕರಿಗೆ ಶರಣಗೌಡ ಪಾಟೀಲ ಪಾಳಾ ಅವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ, ಶಾಂತಗೌಡ ಪಾಟೀಲ, ರೇವಣಯ್ಯ ಸ್ವಾಮಿ ಕುಸನೂರ, ರಮೇಶ್ ತೆಗ್ಗಿನಮನಿ, ಈರಣ್ಣ ಬಿರಾದರ್, ಶಿವಕುಮಾರ್ ಅಂಬಲಿಗಿ, ನಾಗೇಂದ್ರ ಉದನೂರ, ಭೀಮಶಂಕರ್ ಹೂಗಾರ್ ಶಿವಯೋಗಿ ಭಜಂತ್ರಿ ಸೇರಿದಂತೆ ಹಲವಾರು ರೈತ ಮುಖಂಡರು ಉಪಸ್ಥಿತರಿದ್ದರು.
-