ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ಕಾವಿನಲ್ಲಿ ಗ್ರಾಮೀಣ ಸಾಧಕ ಪುರಸ್ಕಾರ
ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ಕಾವಿನಲ್ಲಿ ಗ್ರಾಮೀಣ ಸಾಧಕ ಪುರಸ್ಕಾರ.
ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಬೇಕು ಕುಮಾರ್ ಪೆರ್ನಾಜೆ.
ಪೆರ್ನಾಜೆ:ಲಯನ್ಸ್ ಕ್ಲಬ್ ಎಂದಾಗ ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದು ಇತ್ತು ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೊಂದು ಸೇವಾ ಸಂಸ್ಥೆ ಅಷ್ಟೇ ಆಗಿ ಅಲ್ಲದೆ ಆಗಿದ್ದು ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಿದಾಗಲೇ ಇದಕ್ಕೊಂದು ಅರ್ಥ ಸಿಗುತ್ತದೆ ಎಂದು ಸನ್ಮಾನವನ್ನು ಸ್ವೀಕರಿಸಿದ ಕುಮಾರ್ ಪೆರ್ನಾಜೆ ಡಿಸೆಂಬರ್ 16ರಂದು ಕಾವು ಮುಖ್ಯರಸ್ತೆಯ ಸಮುದಾಯ ಭವನದಲ್ಲಿ ನಡೆದ ಅಂತರ್ ರಾಷ್ಟ್ರೀಯ ಲಯನ್ಸ್ ಇದರ ಮಟ್ಟದಲ್ಲಿ ಲಯನ್ಸ್ ಜಿಲ್ಲೆ 317d , 7 ,ವಲಯ ಎರಡರ ಲಯನ್ಸ್ ಕ್ಲಬ್
ಪುತ್ತೂರು ಕಾವು ಇದರ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಬೇಟಿಯ ಸಂದರ್ಭದಲ್ಲಿ ಮಾತನಾಡುತ್ತಾ ಈ ಕ್ಲಬ್ ಇನ್ನಷ್ಟು ಎತ್ತರಕ್ಕೆ ಇರಲೆಂದು ಹಾರೈಸಿದರು. ಕಾವು ಹೇಮನಾಥ ಶೆಟ್ಟಿ ಸ್ಥಾಪಕ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾವು ಇವರು ಸಂಶೋಧಕರು, ಕಲಾ ನಿರ್ದೇಶಕರು ಕಲಾಪೋಷಕ ಜೇನು ಗಡ್ಡ ದಾರಿ ಬರಹಗಾರ ಕುಮಾರ್ ಪೆರ್ನಾಜೆ ಸೌಮ್ಯ ಅವರನ್ನು ಶಾಲು ಪೇಟ ಹಾರ ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಿದರು.
ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷರಾದ ದಿವ್ಯ ನಾಥ ಶೆಟ್ಟಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು .ಇದೇ ಸಂದರ್ಭದಲ್ಲಿ ಕಾವಿನ ಹಿರಿಯರಾದ ಮೋಹನ್ ಶಣೈ ಬಂಡಸಾಲೆ
ಮಂಜಣ್ಣ ಎಂದೆ ಕ್ಯಾತರಾದ ಮಾಲೀಕರು ದಿನಸಿ ಅಂಗಡಿ ಮಾಲೀಕರು ಕೆಎಸ್ಆರ್ಟಿಸಿ ನಿವೃತ್ತ ಟಿಸಿಯಾಗಿ ಮಾಜಿ ಉದ್ಯೋಗಿ ದಿನೇಶ್ ಗೌಡ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು. ಪ್ರಾಂತ್ಯ ಅಧ್ಯಕ್ಷರಾದ ಎಂ ಆನಂದ ರೈ ಮತ್ತು ಪತ್ನಿ, ಲಯನ್ಸ್ ವಲಯ ಅಧ್ಯಕ್ಷರಾದ ಜಗನ್ನಾಥ ರೈ ಗುತ್ತು ವಲಯ ರಾಯಭಾರಿಯಾದ
ರಮೇಶ್ ರೈ ಸಾಂತ್ಯ, ಸಮಾರಂಭದ ಅಧ್ಯಕ್ಷರು ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ ಇಬ್ರಾಹಿಂ ಹಾಜಿ,ಕ್ಲಬ್ ಕೋಶಾಧಿಕಾರಿ ರಮೇಶ್ ಆಳ್ವ ಆಲೆಪ್ಪಾಡಿ ಗುತ್ತು ಕ್ಲಬ್ ನ ಕಾರ್ಯದರ್ಶಿ ದೇವಣ್ಣ ರೈ ಮುದರ್ಪಳ್ಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಪ್ರತಿಷ್ಠಾನ ಮಂಗಳೂರು ಘಟಕದ ಆಡಳಿತ ಮಂಡಳಿ ನಿರ್ದೇಶಕ ಜಯಪ್ರಕಾಶ್ ರೈ ,ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷರಾದ ಪಾವನ ರಾಮ ರವರು ಸಹಕರಿಸಿದರು. ಸುರೇಖಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಈ ಒಂದೇ ವರ್ಷದಲ್ಲಿ ನಾಲ್ಕು ಪ್ರಶಸ್ತಿ ಸನ್ಮಾನಗಳನ್ನು ಸ್ವೀಕರಿಸಿದ ದಂಪತಿಗಳು ಕಲಾಕುಂಜ ದಾವಣಗೆರೆ ಶ್ರೀಮತಿ ಸರಸ್ವತಿ ದಾಸಪ್ಪ
ಶಣೈ ಪ್ರತಿಷ್ಠಾನ ಸಾಲಿಗ್ರಾಮ ಸಂಸ್ಕೃತಿ ಸಾಧಕ ಸಿರಿ ರಾಷ್ಟ್ರಪ್ರಶಸ್ತಿ ನೀಡಿದರು. ಆರ್ ಪಿ ಕಲಾ ಸೇವಾ ಟ್ರಸ್ಟ್ ರಿ ಪಾಂಬರ್ ಪುತ್ತೂರಲ್ಲಿ ಅಂತರ್ ರಾಜ್ಯಮಟ್ಟದ ಕೃಷಿ ರತ್ನ ಪ್ರಶಸ್ತಿ ನೀಡಿದರು.
ಚಂದನ ಸಾಹಿತ್ಯ ವೇದಿಕೆ ಸುಳ್ಯ ಚಂದನ ಸಾಹಿತ್ಯ ಸಂಗೀತ ಸಂಭ್ರಮೋತ್ಸವ 2025 ರ ಆದರ್ಶ ಜೇನು ಕೃಷಿ ದಂಪತಿಗಳು ಪ್ರಶಸ್ತಿ ನೀಡಿದ್ದಾರೆ. ಈಗಾಗಲೇ ಹೀಗೆ ಹಲವಾರು ಪ್ರಶಸ್ತಿಗಳನ್ನು ನಾಡಿನದ್ಯಂತ ಸ್ವೀಕರಿಸಿದ ಪೆರ್ನಾಜೆ ದಂಪತಿಗಳು ಹಿರಿಮೆಗೆ ಮತ್ತೊಂದು ಗರಿಮೆ.
