ಕುಸನೂರು: ಶ್ರೀ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಸಿಮೆಂಟ್ ಆಸನಗಳು ದಾನ
ಕುಸನೂರು: ಶ್ರೀ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಿಂದ ಸಿಮೆಂಟ್ ಆಸನಗಳು ದಾನ
ಕುಸನೂರು ಗ್ರಾಮದಲ್ಲಿರುವ ಶ್ರೀ ಗವಿಸಿದ್ದೇಶ್ವರ ದೇವಸ್ಥಾನಕ್ಕೆ ಸಾರ್ವಜನಿಕ ಅನುಕೂಲಕ್ಕಾಗಿ ಐದು ಸಿಮೆಂಟ್ ಆಸನಗಳನ್ನು ನೀಡುವ ಮೂಲಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಕುಪೇಂದ್ರ ಬರಗಾಲಿ ಅವರು ಸಮಾಜಸೇವೆಯ ಕಾರ್ಯ ಶ್ಲಾಘನೀಯವಾಗಿದೆ. ಅವರ ವೈಯಕ್ತಿಕ ಹಣದಿಂದ ದೇಣಿಗೆ ರೂಪದಲ್ಲಿ ನಿರ್ವಹಿಸಿದ್ದಾರೆ.
ದೇವಾಲಯಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರಿಗೆ ಕುಳಿತು ವಿಶ್ರಾಂತಿ ಪಡೆಯಲು ಅನುಕೂಲವಾಗುವಂತೆ ಈ ಆಸನಗಳನ್ನು ಒದಗಿಸಲಾಗಿದ್ದು, ಗ್ರಾಮಸ್ಥರು ಅವರ ಈ ಸೇವಾಭಾವವನ್ನು ಮೆಚ್ಚಿಕೊಂಡಿದ್ದಾರೆ. ದೇವಾಲಯ ಪರಿಸರದಲ್ಲಿ ದಿನನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಈ ಸೌಲಭ್ಯವು ಎಲ್ಲರಿಗೂ ಉಪಯುಕ್ತವಾಗಲಿದೆ ಎಂದು ತಿಳಿಸಲಾಗಿದೆ.
ಈ ಪುಣ್ಯ ಕಾರ್ಯಕ್ಕೆ ಶ್ರೀ ಗವಿಸಿದ್ದೇಶ್ವರ ಸ್ವಾಮಿಯವರ ಆಶೀರ್ವಾದ ಸದಾ ಅವರ ಮೇಲೆ ಇರಲಿ. ಅವರಿಗೆ ಉತ್ತಮ ಆರೋಗ್ಯ, ಐಶ್ವರ್ಯ ಮತ್ತು ಇನ್ನಷ್ಟು ಸಮಾಜಸೇವೆ ಮಾಡುವ ಶಕ್ತಿ ಲಭಿಸಲಿ ಎಂದು ವೇ.ಮೂ. ಮಲ್ಲಯ್ಯ ಸ್ವಾಮಿಗಳು ಅವರಿಗೆ ಆಶೀರ್ವದಿಸಿದರು.
ಗ್ರಾಮಸ್ಥರು ಹಾಗೂ ಭಕ್ತರು ಬರಗಲಿಯವರಿಗೆ ಹಾರೈಸಿದ್ದಾರೆ. ರೇವಣಯ್ಯ ಸ್ವಾಮಿ,ಮಂಜು ಸ್ವಾಮಿ ಸೇರಿದಂತೆ ಅನೇಕ ಉಪಸ್ಥಿತರಿದ್ದರು
