ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ.

ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ.
ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ.

ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ.

ಕಲಬುರಗಿ.ಸದಾಶಿವ ನಗರದ ಶ್ರೀ ಗಣೇಶ ಮಂದಿರ ಗಣೇಶ ವಿಸರ್ಜನಾ ದಿನದಂದು ಬಡಾವಣೆಯ ಹತ್ತನೇ ಮತ್ತು ಪಿ.ಯು.ಸಿ‌.ಯಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕಲಬುರಗಿ ದಕ್ಚಿಣ ಕ್ಚೇತ್ರದ ಶಾಸಕರಾದ ಶ್ರೀ ಅಲ್ಲಮಪ್ರಭು ಪಾಟೀಲರು ಪ್ರತಿಭೆ ಎನ್ನುವುದು ಯಾರೊಬ್ಬರ ಸ್ವತ್ತಲ್ಲಾ ಅಂತಹ ಪ್ರತಿಭೆಯನ್ನು ಪಡೆದ ಮಕ್ಕಳು ತಮ್ಮ ಪಾಲಕರು ಹಾಗೂ ಊರಿನ,ಬಡಾವಣೆಯ ಹೆಸರು ತರಬೇಕು ಎಂದರು .ಮುಂದುವರೆದು ಮಾತನಾಡಿದ ಅವರು ನಾನು ಶಾಸಕ ನಲ್ಲ ನಿಮ್ಮ ಸೇವಕ ನನಗೆ ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆ ಯಾವತ್ತಿಗೂ ಚಿರ ಋಣಿ ಎಂದು ಹೇಳುತ್ತಾ ಈ ಬಡಾವಣೆಗಳ ಜನರೊಟ್ಟಿಗೆ ಯಾವತ್ತಿಗೂ ಇದ್ದು ತಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.ಇದೇ ಸಂಧರ್ಭದಲ್ಲಿ ಮೂರು ದಿನಗಳ ಕಾಲ ಪ್ರಸಾದ ಸೇವೆ ಸಲ್ಲಿಸಿದ ಮಹನಿಯರನ್ನು ಗೌರವಿಸಲಾಯಿತು.ಪ್ರಧಾನ ಅರ್ಚಕ ವಿವೇಕಸ್ವಾಮಿ ದಂಪತಿಗಳನ್ನು ಸಮಿತಿಯ ಪರವಾಗಿ ಗೌರವಿಸಲಾಯಿತು .

ವೇದಿಕೆಯಲ್ಲಿ ,ದಕ್ಚಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಚ ಲಿಂಗರಾಜ ತಾರಫೈಲ್, ಹಾವೇಂದ್ರ ಪುಣ್ಯಶೆಟ್ಟಿ ಡಾ.ಮುದ್ದಾ,ಅಮೀನರಡ್ಡಿ,ಡಾ.ಮಲ್ಲಿಕಾರ್ಜುನ ಚಿಕ್ಕಪಾಟೀಲ ಉಪಸ್ತಿತರಿದ್ದರು,ಶ್ರೀ ವೀರಣ್ಣಗುಗ್ವಾಡ್ ನಿರೂಪಿಸಿದರು ವೀರಭದ್ರಪ್ಪಾ ಪಾಟೀಲ ವಂದಿಸಿದರು. ಸದಾಶಿವ ನಗರ,ನವಜೀವನ ನಗರ,ಮೋಹನ ನಗರ,ಗಾಬರೇ ಲೇಔಟ ನ ನಿವಾಸಿಗಳು ಮಹಿಳೆಯರು ಮಕ್ಕಳು ಉಪಸ್ತಿತರಿದ್ದರು,ಮಹಾಮಂಗಳಾರತಿ ನಂತರ ಗಣೇಶನನ್ನು ವಿಸರ್ಜಿಸಲಾಯಿತು.