23 ಕ್ಕೆ ಅವ್ವ ಪ್ರಶಸ್ತಿ
23 ಕ್ಕೆ ಅವ್ವ ಪ್ರಶಸ್ತಿ
ಕಲಬುರಗಿ : ಮಾತೋಶ್ರೀ ಈರಮ್ಮ ವಡ್ಡನಕೇರಿ ಪ್ರತಿಷ್ಠಾನ ಡೊoಗರಗಾoವ್ ಗ್ರಾಮದ ವತಿಯಿಂದ ಎಂಟನೇ ವರ್ಷದ ಅವ್ವ ಪ್ರಶಸ್ತಿ ಪ್ರಧಾನ ಹಾಗೂ ಕೃತಿ ಲೋಕಾರ್ಪಣೆ ಸಮಾರಂಭವನ್ನು ಕಲಬುರಗಿ ರಂಗಾಯಣ ಸಭಾಂಗಣದಲ್ಲಿ 23/11/2024 ರಂದು 10:30 ಕ್ಕೆ ಹಮ್ಮಿಕೊಳ್ಳಲಾಗಿದ್ದು ಸುಕ್ಷೇತ್ರ ಮುತ್ಯಾನ ಬಬಲಾದ ಮಠದ ಪರಮ ಪೂಜ್ಯಶ್ರೀ ಮ. ನಿ. ಪ್ರ. ಸ್ವ. ಗುರುಪಾದಲಿಂಗ ಮಹಾ ಶಿವಯೋಗಿಗಳು ನೇತೃತ್ವ ವಹಿಸಿರುವ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಪೂಜ್ಯ ಮಾತೋಶ್ರೀ ದಾಕ್ಷಾಯಿಣಿ ಎಸ್ ಅಪ್ಪ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಗ್ರಾಮೀಣ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಬಸವರಾಜ ಮತ್ತಿಮಡು ಡಾ.ಶರಣಬಸಪ್ಪ ವಡ್ಡನಕೇರಿ ಅವರು ರಚಿಸಿದ ಮಾರ್ಗ ಮತ್ತು ಸಿದ್ದಯ್ಯ ಪುರಾಣಿಕ್ ವಾಚಿಕೆ ಎರಡು ಕೃತಿಗಳ ಲೋಕಾರ್ಪಣೆ ಗೊಳಿಸಲಿದ್ದು ಕಾರ್ಯಕ್ರಮದ ದಕ್ಷತೆಯನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಿರಿಯ ಉಪಾಧ್ಯಕ್ಷರಾದ ಶ್ರೀ ಅಪ್ಪಾರಾವ್ ಅಕ್ಕೋಣೆ ವಹಿಸಲಿದ್ದು ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೇಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲ್ಲಿದ್ದಾರೆ.ಇದೇ ಸಂದರ್ಭದಲ್ಲಿ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರದ ಸದಸ್ಯರಾಗಿ ನೇಮಕಗೊಂಡ ಶ್ರೀ ಸಿದ್ದರಾಮ ಹೊನಕಲ್, ಡಾ. ಸುಜಾತ ಜಂಗಮಶೆಟ್ಟಿ,ಡಾ.ಚಂದ್ರಕಲಾ ಬಿದರಿ, ಶ್ರೀ ಬಿ.ಎಚ್ ನಿರಗುಡಿ ಅವರನ್ನು ಸನ್ಮಾನಿಸಲಿದ್ದು,ವಿವಿದ ಕ್ಷೆತ್ರದಲ್ಲಿ ಸಾಧನೆಗೈದು ಅವ್ವ ಪ್ರಶಸ್ತಿ ಪಡೆದ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಶರಣಬಸಪ್ಪ ವಡ್ಡನಕೇರಿ ಹಾಗೂ ಸಂಚಾಲಕರಾದ ಡಾ. ನಾಗಪ್ಪ ಟಿ.ಗೋಗಿಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.