ಮಕ್ಕಳ ದಿನಾಚರಣೆಗೆ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇನ್ನರ್‌ವೀಲ್ ಕ್ಲಬ್–ಗುಲ್ಬರ್ಗ ಸನ್‌ಸಿಟಿ ವಿಶೇಷ ಕಾರ್ಯಕ್ರಮ ನಡೆಯಿತು
ಮಕ್ಕಳ ದಿನಾಚರಣೆಗೆ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇನ್ನರ್‌ವೀಲ್ ಕ್ಲಬ್–ಗುಲ್ಬರ್ಗ ಸನ್‌ಸಿಟಿ ವಿಶೇಷ ಕಾರ್ಯಕ್ರಮ ನಡೆಯಿತು
ಕಲಬುರಗಿ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಇಂದು (14.11.2025) ಇನ್ನರ್‌ವೀಲ್ ಕ್ಲಬ್ ಗುಲ್ಬರ್ಗ ಸನ್‌ಸಿಟಿ ಅವರ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಭರ್ಜರಿಯಾಗಿ ಜರುಗಿತು. ಪ್ರಾರಂಭದಲ್ಲಿ ಅತಿಥಿಗಳಿಗೆ ಸ್ವಾಗತ ಸಲ್ಲಿಸಲಾಯಿತು. ಗುಲ್ಬರ್ಗ ಇನ್ನರ್‌ವೀಲ್ ಕ್ಲಬ್‌ನ ಅಧ್ಯಕ್ಷೆ ಶ್ರೀಮತಿ ಸ್ವಾತಿ ಪವಾರ್ ಹಾಗೂ ಕಾರ್ಯದರ್ಶಿ ಶ್ರೀಮತಿ ಶಿಲ್ಪಾ ಜೈನ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶೋಭೆ ತಂದುಕೊಟ್ಟರು.
ಕಾರ್ಯಕ್ರಮದ ಮೊದಲ ಹಂತದಲ್ಲಿ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ನೀಡಲಾಗಿದ್ದು, ಪುಟಾಣಿಗಳು ಮನೋಹರ ನೃತ್ಯ, ಗಾನ ಮತ್ತು ವೈವಿಧ್ಯಮಯ ಕಲೆಗಳನ್ನು ಮೆರೆದರು. ನಂತರ ನಡೆದ ‘ಅಲಂಕಾರಿಕ ಉಡುಗೆ ಸ್ಪರ್ಧೆ’ಯಲ್ಲಿ “ಸಮುದಾಯ ಸಹಾಯಕರು” ಎಂಬ ವಿಷಯದ ಆಧಾರವಾಗಿ ಪೊಲೀಸರು, ವೈದ್ಯರು, ಶಿಕ್ಷಕರು, ಅಗ್ನಿಶಾಮಕ ದಳದ ಸಿಬ್ಬಂದಿ ಸೇರಿದಂತೆ ಹಲವು ಪಾತ್ರಧಾರಿಗಳ ವೇಷಭೂಷಣದಲ್ಲಿ ಮಕ್ಕಳು ರಂಗೇರಿಸಿದರು.
ಜತೆಗೆ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ಸ್ಥಳದಲ್ಲೇ ಪ್ರದರ್ಶಿಸುವದರ ಮೂಲಕ ವಿಜ್ಞಾನಾಭಿರುಚಿ ಬೆಳೆಸುವ ಪ್ರಯತ್ನವೂ ನಡೆಯಿತು. ಕೊನೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸುಮಾರು 15 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಒಟ್ಟು 148ಕ್ಕೂ ಹೆಚ್ಚು ಪಾಲಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದು ಮಕ್ಕಳ ದಿನಾಚರಣೆಗೆ ವಿಶೇಷ ಕಳೆ ತಂದರು. ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
