ಸಗರ ಶಂಕರನಾರಾಯಣ ಕೆರೆ ನಾಲಾ ಸ್ವಚ್ಛಗೊಳಿಸಲು - ರೈತರ ಆಗ್ರಹ.

ಸಗರ ಶಂಕರನಾರಾಯಣ ಕೆರೆ ನಾಲಾ ಸ್ವಚ್ಛಗೊಳಿಸಲು - ರೈತರ ಆಗ್ರಹ.

ಶಹಾಪುರ ಗ್ರಾಮೀಣ, ವರದಿ ಬಸವರಾಜ ಶಿನ್ನೂರಸಗರ

 ಶಂಕರನಾರಾಯಣ ಕೆರೆ ನಾಲಾ ಸ್ವಚ್ಛಗೊಳಿಸಲು - ರೈತರ ಆಗ್ರಹ.

ಶಹಪುರ : ಯಾದಗಿರಿ ಜಿಲ್ಲೆಯ ದೊಡ್ಡ ಕೆರೆಗಳಲ್ಲಿ ಒಂದಾಗಿರುವ ತಾಲೂಕಿನ ಸಗರ ಶಂಕರನಾರಾಯಣನ ಕೆರೆ ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ.ಆದರೆ ವಿಪರ್ಯಾಸವೇನಂದರೆ,ಹೂಳು ತುಂಬಿರುವ ಕೆರೆಯ ನಾಲಾ ಸ್ವಚ್ಛಗೊಳಿಸದೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ.

ಕೆರೆ ನೀರು ತುಂಬಿದ ಮೇಲೆ ತೂಬಿನ ಹಾಗೂ ನಾಲಾ ಮೂಲಕ ಹರಿದು ಹಳ್ಳ ಸೇರುತ್ತದೆ,ನಾಲಾ ಸ್ವಚ್ಛಗೊಳಿಸದ ಕಾರಣದಿಂದಾಗಿ ಹೂಳು ತುಂಬಿಕೊಂಡು ಹೆಚ್ಚುವರಿ ನೀರು ನಾಲಾದ ಪಕ್ಕದಲ್ಲಿರುವ ಹೊಲಗದ್ದೆಗಳಿಗೆ ನುಗ್ಗಿ, ಹೊಲಗದ್ದೆಗಳಲ್ಲಿ ನೀರು ಪಾಚಿಗಟ್ಟಿ ದುರ್ವಾಸನೆ ಬೀರುತ್ತಿದೆ,ಜೊತೆಗೆ ಸೊಳ್ಳೆಗಳು ಉತ್ಪತ್ತಿಯಾಗಿ, ರೋಗ ರುಜಿನಗಳು ಹರಡುವ ಭೀತಿಯಲ್ಲಿ ಗ್ರಾಮದ ಸಾರ್ವಜನಿಕರಿಗೆ ತುಂಬಾ ಆತಂಕ ಮನೆ ಮಾಡಿದೆ,

ಕೆರೆಯ ನಾಲಾ ಸ್ವಚ್ಛಗೊಳಿಸಬೇಕೆಂದು ಸಾಕಷ್ಟು ಬಾರಿ ಯಾದಗಿರಿಯ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯ ಗಮನಕ್ಕೆ ತಂದರು ಪ್ರಯೋಜನೆಯಾಗಿಲ್ಲ, ಕಳೆದ ಆರು ತಿಂಗಳ ಹಿಂದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬಂದು ಸರ್ವೇ ಮಾಡಿದರು ಇನ್ನುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ,ಕೆರೆಯ ನಾಲಾ ಸ್ವಚ್ಛ ಗೊಳಿಸಬೇಕು ಇಲ್ಲದಿದ್ದರೆ ಸಣ್ಣ ನೀರಾವರಿ ಇಲಾಖೆಗೆ ಬೀಗ ಜಡೆದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಗ್ರಾಮದ ನೊಂದ ರೈತರು ಆಗ್ರಹಿಸಿದ್ದಾರೆ.