ಲಿಂ ಪೂಜ್ಯ ಡಾ.ಶರಣಬಸವಪ್ಪ ಅಪ್ಪರಿಗೆ ನುಡಿ ಪುಷ್ಪಾಂಜಲಿ ನಮನ

ಲಿಂ ಪೂಜ್ಯ ಡಾ.ಶರಣಬಸವಪ್ಪ ಅಪ್ಪರಿಗೆ ನುಡಿ ಪುಷ್ಪಾಂಜಲಿ
ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದಿಂದ ನುಡಿ ಪುಷ್ಪಾಂಜಲಿ ಕಾರ್ಯಕ್ರಮ
ಕಲಬುರಗಿ : ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಹಾಗೂ ಶರಣಬಸವ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ದಿನಾಂಕ 28-08-2025 ಗುರುವಾರ ಮಧ್ಯಾಹ್ನ 12.45 ಗಂಟೆಗೆ ಶರಣ ಬಸವೇಶ್ವರರ ದೇವಾಲಯದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕಲ್ಯಾಣ ನಾಡಿನ ವಾಸ್ತವ್ಯ ನೆಲೆಗಟ್ಟಿನ ಮಹಾನ ದಾರ್ಶನಿಕ, ಶಿಕ್ಷಣ ಭಂಡಾರಿ, ಸಮಸ್ತ ಜನಾಂಗದ ಪೂಜ್ಯನೀಯ ಮಹಾದಾಸೋಹಿ, ಲಿಂಗೈಕ್ಯ ಪರಮಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರ ಸ್ಮರಣಾರ್ಥವಾಗಿ "ನುಡಿ ಪುಷ್ಪಾಂಜಲಿ ನಮನ" ಸಲ್ಲಿಸಲಾಗುವುದು.
ಅಪ್ಪಾಜಿಗೆ ನಮನ ಸಲ್ಲಿಸುವ ಈ ಮಹತ್ವದ ಕಾರ್ಯಕ್ರಮದಲ್ಲಿ ಸಮಿತಿಯ ಗೌರವಾಧ್ಯಕ್ಷರು ಸನ್ಮಾನ್ಯ ಶ್ರೀ ಬಸವರಾಜ ದೇಶಮುಖ ಅವರ ಮಾರ್ಗದರ್ಶನ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳು, ಹಾಗೂ ಶರಣಬಸವೇಶ್ವರ ಸಂಸ್ಥಾನದ ಆಡಳಿತ ಅಧಿಕಾರಿಗಳಾದ ಡಾ ಅಲ್ಲಮಪ್ರಭು ದೇಶಮುಖ್ ನೇತೃತ್ವದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಪರವಾಗಿ ಶರಣಗೌಡ ಪಾಟೀಲ ಪಾಳಾ ಅವರು ಎಲ್ಲರನ್ನು ಕಾರ್ಯಕ್ರಮದಲ್ಲಿ ತಪ್ಪದೆ ಪಾಲ್ಗೊಳ್ಳುವಂತೆ ವಿನಂತಿಸಿದ್ದಾರೆ.