ಜಗದ್ಗುರು ಮೌನೇಶ್ವರರ ಜನ್ಮ ಭೂಮಿಯಲ್ಲಿ ವಚನ ಕ್ರಾಂತಿಯ ತವರೂರು

ಜಗದ್ಗುರು ಮೌನೇಶ್ವರರ ಜನ್ಮ ಭೂಮಿಯಲ್ಲಿ ವಚನ ಕ್ರಾಂತಿಯ ತವರೂರು
ಆಳಂದ: ಪಟ್ಟದ ಸಿದ್ದಲಿಂಗ ಬಿ. ಸುತಾರ ಇವರ ಮಹಾ ಮನೆಯಲ್ಲಿ ಆಯೋಜಿಸಿದ ಮನೆ ಮನಗಳಲ್ಲಿ ಶ್ರೀ ಮೌನೇಶ್ವರರ ವಚನಗಳ ಚಿಂತನ ಮಂಥನ ಕಾರ್ಯಕ್ರಮದ ಸಾನಿದ್ಯವನ್ನು ಅಫಜಲಪೂರದ ಮೂರ ಜಾವದೀಶ್ವರ ಮಠದ ಪೂಜ್ಯಶ್ರೀ ಬ್ರಹ್ಮಾನಂದ ಮಹಾಸ್ವಾಮಿಗಳು ವಹಿಸಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕ ಘಟಕದ ಅಧ್ಯಕ್ಷರಾದ ಬಸವರಾಜ ವಿಶ್ವಕರ್ಮ ಕ್ರಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಡಾ. ಮೋನಪ್ಪ ಎಲ್. ಸುತಾರ ಪ್ರಾಸ್ತಾವಿಕವಾಗಿ ಮಾತನಾಡಿ ವಿಶ್ವಗುರು ಬಸವಣ್ಣನವರ ವಚನಾಂಕಿತದಲ್ಲಿ ಜಗದ್ಗುರು ಮೌನೇಶ್ವರರ 800 ಕ್ಕು ಹೆಚ್ಚು ವಚನಗಳು ಲಭ್ಯವಿದ್ದು, ಭಾವೈಕ್ಯದ ನಡೆ ಕಲಿಸುತ್ತವೆ. ಅದ್ಯ ವಚನಕಾರ ಜೇಡರದಾಸಿ ಮಯ್ಯನ ನೆಲದಲ್ಲಿ ಜನಿಸಿದ ಮೌನೇಶ್ವರ ಜನ್ಮ ಭೂಮಿ ವಚನ ಕ್ರಾಂತಿಯ ತವರೂರು ಎಂದರು. ಬಾಬುರಾವ್ ಸುತಾರ ಉಪನ್ಯಾಸ ನೀಡಿ ಅನುಭಾವದ ಅಮೃತದಂತಿರುವ ಇವರ ವಚನಗಳಿಗೆ ಪ್ರಚಾರ ಸಿಕ್ಕದೆ ತೆರೆಮರೆಯಲ್ಲಿಯೇ ಉಳಿದಿವೆ ಎಂದರು. ತಾಲೂಕು ವಚನ ಸಾಹಿತ್ಯ ಪರಿಷತ ಅದ್ಯಕ್ಷರಾದ ಅಪ್ಪಾಸಾಹೇಬ ತೀರ್ಥೆ ಮುಖ್ಯ ಅಥಿತಿಗಳಾಗಿ, ಶಿವಲಿಂಗಪ್ಪ ಮಂಟಗಿ ಅಥಿತಿಗಳಾಗಿ ಭಾಗವಹಿಸಿದರು. ದೇವಿಂದ್ರಪ್ಪ ಪೋದ್ದಾರ, ಬಸವಣ್ಣಪ್ಪ ಸುತಾರ, ಮನೋಹರ ಪೋದ್ದಾರ, ಬಸವರಾಜ ಸುತಾರ, ಸೇರಿದಂತೆ ಅನೇಕ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ಕಾಂತ ಸುತಾರ ಸ್ವಾಗತಿಸಿದರೆ ರಾಮಣ್ಣ ಸುತಾರ ನಿರೂಪಿಸಿದರು ಶಿವಾನಂದ ಸುತಾರ ವಂದಿಸಿದರು.