ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರ 140ನೇ ಜಯಂತಿ ಆಚರಣೆ
ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರ 140ನೇ ಜಯಂತಿ ಆಚರಣೆ
ಕಲಬುರಗಿ: ಕರ್ನಾಟಕದ ಗಾಂಧಿ ಎಂದೇ ಪ್ರಖ್ಯಾತರಾಗಿರುವ, ಚರಕ ಧಾರಿ ಹಾಗೂ ಬಸವ ಜಯಂತಿ ಉತ್ಸವಕ್ಕೆ ಚಾಲನೆ ನೀಡಿದ ಮಹನೀಯರಾದ ಹರ್ಡೇಕರ ಮಂಜಪ್ಪ ಅವರ 140ನೇ ಜಯಂತಿ ಪ್ರಯುಕ್ತ ವಿಶೇಷ ಕಾರ್ಯಕ್ರಮವನ್ನು ಇಂದು ಸಂಜೆ 7.30ರಿಂದ 8.30ರವರೆಗೆ ಜರುಗಿತು.
ಈ ಕಾರ್ಯಕ್ರಮವು ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಕಚೇರಿಯಲ್ಲಿ ಜರುಗಲಿದ್ದು, ಸಾರ್ವಜನಿಕರು ಹಾಗೂ ಅಭಿಮಾನಿಗಳು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ. ಶ್ರೀ ಅನಾದಿ ಚಂದ್ರಶೇಖರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಿವರಾಜ್ ಅಂಡಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಪ್ರಸ್ತಾವನೆಯನ್ನು ಸಪ್ತ ನೇಕಾರ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಶಿವಲಿಂಗಪ್ಪ ಅಷ್ಟಗಿ ಮಂಡಿಸಿದರು.
ನ್ಯಾಯವಾದಿ ಜೆ. ವಿನೋದಕುಮಾರ್ ಸ್ವಾಗತಿಸಿದರು, ಸಂಘದ ವಕ್ತಾರ ರಾಜು ಕೋಷ್ಠಿ ವಂದಿಸಿದರು
ಹರ್ಡೇಕರ ಮಂಜಪ್ಪ ಅವರ ತ್ಯಾಗ, ಸರಳತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಸ್ಮರಿಸಿದರು
