ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ ಅವರಿಗೆ ಕನ್ನಡ ಸೇವಾ ರತ್ನ ಪ್ರಶಸ್ತಿ

ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ ಅವರಿಗೆಕನ್ನಡ ಸೇವಾ ರತ್ನ ಪ್ರಶಸ್ತಿ

ಪ್ರಸಕ್ತ ನವೆಂಬರ್ ೫ ರಂದು ಬೀದರ್ ನ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಶ್ರೀ ಕೇತಕಿ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಸಂಸ್ಥೆ (ರಿ) ಬೀದರ ಹಾಗೂ ಹಣ್ಮು ಪಾಜಿ ಗೆಳೆಯರ ವತಿಯಿಂದ ೫೦ ರ ಕರ್ನಾಟಕ ಸಂಭ್ರಮ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನೀಡಲಾಗುವ ರಾಜ್ಯ ಮಟ್ಟದ *ಕನ್ನಡ ಸೇವಾ ರತ್ನ ಪ್ರಶಸ್ತಿ* ಗೆ ಹಿರಿಯ ಸಾಹಿತಿ ಪ್ರೊ.ಶೋಭಾದೇವಿ ಚೆಕ್ಕಿ ಸೇಡಂ ಆಯ್ಕೆಯಾಗಿದ್ದಾರೆಂದು ಸಂಸ್ಥೆಯ ಅಧ್ಯಕ್ಷ ಹಣ್ಮು ಪಾಜಿ ತಿಳಿಸಿದ್ದಾರೆ.

       ಪ್ರೊ.ಶೋಭಾದೇವಿ ಚೆಕ್ಕಿಯವರು ಕಲಬುರಗಿಯಲ್ಲಿ ೭.೨.೧೯೬೩ ರಂದು ಕನ್ನಡ ಪ್ರಾಧ್ಯಾಪಕರಾದ ಪ್ರೊ.ಬಸವಣ್ಣಪ್ಪ ಚೆಕ್ಕಿ ಹಾಗೂ ಪ್ರೊ.ಪಾರ್ವತಿ ಚೆಕ್ಕಿ ಯವರ ಉದರದಲ್ಲಿ ಜನಿಸಿದರು. ಕಲಬುರಗಿಯಲ್ಲಿಯೇ ಸ್ನಾತಕೋತ್ತರ ಶಿಕ್ಷಣವನ್ನು ಪೂರೈಸಿ, ಸೇಡಂ ನ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ೩೮ ವರ್ಷಗಳ ಕಾಲ ಸಮಾಜಶಾಸ್ತ್ರದ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಪದವಿ ವಿದ್ಯಾರ್ಥಿಗಳಿಗೆ ೩೦ ಸಮಾಜಶಾಸ್ತ್ರದ ಪಠ್ಯಪುಸ್ತಗಳನ್ನು ರಚಿಸಿದ್ದಾರೆ. ವಚನ ಸಾಹಿತ್ಯ, ಮಕ್ಕಳ ಸಾಹಿತ್ಯ, ಜನಪದ ಸಾಹಿತ್ಯ,ಕ್ಕೆ ಸಂಬಂಧಿಸಿದಂತೆ ೩೫ ಕ್ಕೂ ಮೇಲ್ಪಟ್ಟು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿದ್ದಾರೆ. 

         ಕಳೆದ ೧೮ ವರ್ಷಗಳಿಂದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಸೇಡಂ ಘಟಕದ ಅಧ್ಯಕ್ಷೆಯಾಗಿ,ಶಾಂಭವಿ ಮಹಿಳಾ ಸಂಘ ಸೇಡಂನ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನವೆಂಬರ್ ೧೦ ರಂದು ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಜರುಗಲಿರುವ ಪ್ರಥಮ ಜನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇವರ ಸಾಮಾಜಿಕ, ಸಾಹಿತ್ಯಿಕ, ಶೈಕ್ಷಣಿಕ, ಚಟುವಟಿಕೆಗಳಿಗೆ ಅವರ ಪತಿ ಪ್ರೊ. ಟಿ.ಶಿವಶರಣಪ್ಪ ಇಂಗ್ಲೀಷ್ ಪ್ರಾಧ್ಯಾಪಕರು ಸೇಡಂ ಅವರ ಸಹಕಾರ ಹಾಗೂ ಪ್ರೋತ್ಸಾಹ ಸದಾ ಇದ್ದೇ ಇದೆ.