ಗೋಕುಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮದ ಆಚರಣೆ

ಗೋಕುಲ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ಸಂಭ್ರಮದ ಆಚರಣೆ
ಶಹಾಪುರ : ನಗರದ ಗೋಕುಲ ಕಾಲೇಜಿನಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ರವರ 137 ನೇ ಜನ್ಮ ದಿನ ಮತ್ತು ಶಿಕ್ಷಕರ ದಿನಾಚರಣೆ ಸಂತಸ ಸಡಗರ ಸಂಭ್ರಮದಿಂದ ಆಚರಿಸಲಾಯಿತು,ಕಾರ್ಯಕ್ರಮದಲ್ಲಿ ಅತಿಥಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ವಾದ ಶಹಾಪುರ ತಾಲ್ಲೂಕು ಸಂಘಟನಾ ಸಂಚಾಲಕರಾದ ಮಾನಪ್ಪ ಹುರಸಗುಂಡಗಿ ಅವರು ಶಿಕ್ಷಕರ ಮತ್ತು ವಿದ್ಯಾರ್ಥಿಯ ಕುರಿತು ಮಾತನಾಡುತ್ತಾ ಕನ್ನಡ ಗೀತೆ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು, ಮತ್ತು ವಿದ್ಯಾರ್ಥಿನಿ ಕಲ್ಪನಾ ಕಾಲೇಜಿನ ಉಪನ್ಯಾಸಕರ ಕುರಿತು ಕವನ ವಾಚಿಸಿ ಶಿಕ್ಷಕರ ಕುರಿತು ಅಂಕಿತಾ ಮಾತನಾಡಿದರು, ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಎಂ.ಡಿ.ಇಮ್ರಾನ್, ಉಪನ್ಯಾಸಕರಾದ ಡಿ.ಪಿ.ಸಜ್ಜನ, ಡಾ.ಶ್ರೀಶೈಲ,ಶರಣಬಸಪ್ಪ ಗೋಗಿ,ಹಣಮಂತರಾಯ, ಪರಶುರಾಮ, ಆಕಾಶ,ಹಣಮಂತ,ಕಾರ್ತಿಕ, ಶಶಿಕುಮಾರ,ಅಡಿವೆಪ್ಪ, ಶರಣಮ್ಮ,ಅರ್ಪಿತಾ,ಸಂಗೀತಾ,ಲಕ್ಷ್ಮೀ, ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಮುದ್ದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಧನರಾಜ ದೊಡ್ಡಮನಿ ವಹಿಸಿದರು, ಪ್ರಾರ್ಥನೆ ಗೀತೆ ಸಾಕ್ಷಿ,ಸ್ವಾಗತ ಭಾಗ್ಯಶ್ರೀ,ವಂದನಾರ್ಪಣೆ ಮಾಡಿದರು. ಪ್ರಕಾಶ,ನಿರೂಪಿಸಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು ಎಂದು ಸಂಸ್ಥೆಯ ಅಧ್ಯಕ್ಷರಾದ ಪ್ರಭುಗೌಡ ಅವರು ಪ್ರತಿಕಾ ಪ್ರಕಟಣೆಗಾಗಿ ತಿಳಿಸಿದರು.
ವರದಿ ಡಾ.ಅವಿನಾಶ್ ದೇವನೂರ,