ಗಾಂಧೀಜಿ ಆದರ್ಶ ಪಾಲನೆ ಸಹ ನಿಲ್ಲಿಸಿದ್ದೇವೆ : ಮನೋಜ ಹಿರೇಮಠ
ಗಾಂಧೀಜಿ ಆದರ್ಶ ಪಾಲನೆ ಸಹ ನಿಲ್ಲಿಸಿದ್ದೇವೆ : ಮನೋಜ ಹಿರೇಮಠ
ಕಮಲನಗರ: ಮಹಾತ್ಮಾ ಗಾಂಧಿಯವರ ಪ್ರತಿಮೆಯನ್ನು ಎಲ್ಲೆಡೆ ನಿಲ್ಲಿಸಿದ್ದೇವೆ. ಅಂತೆಯೇ ಅವರ ತತ್ವಾದರ್ಶಗಳ ಆಚರಣೆ ಸಹ ನಿಲ್ಲಿಸಿದ್ದೇವೆ ಎಂದು ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಗಾಂಧಿಯವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ನಂತರ ಅವರು ಮಾತನಾಡಿದರು.
ನೋಟು, ನಾಣ್ಯ, ಅಂಚೆ ಚೀಟಿಯಲ್ಲಿ ಮುಖ ಮುದ್ರೆ ಅವರ ವಿಚಾರಧಾರೆಗಳಿಗೆ ಕುಂಭಕರ್ಣ ನಿದ್ರೆ, ರಸ್ತೆ, ಬಡಾವಣೆ, ಭವನ, ಬಜಾರ್‍ಗೆ ಹೆಸರಿಟ್ಟಿದ್ದೇವೆ. ಅವರಿವರು ಇವರ ಚಿಂತೆಗಳ ವಿರುದ್ಧ ಮಾತನಾಡಿ, ಪುಕ್ಕಟ್ಟೆ ಪ್ರಚಾರ ಪ್ರಸಿದ್ಧಿ ಪಡೆದುಕೊಳ್ಳುತ್ತಿದ್ದಾರೆ. ಗಾಂಧಿ ಅವರು ಪರ ಧರ್ಮ ಸಹಿಷ್ಣುತೆ ವಿವಿಧ ಧರ್ಮಗಳ ಸಮಾನತೆಯಲ್ಲಿ ಬಹು ಸಂಸ್ಕøತಿಯ ಆದರ್ಶ ಕಂಡವರು ಎಂದರು.
ರಾಷ್ಟ್ರಪಿತ ಮಾತ್ಮಗಾಂಧಿ ಂತಕನ ಗುಂಡಿಗೆ ಬಲಿಯಾದ ಕರಾಳ ದಿನ. ಈ ದಿನವನ್ನು ಹುತಾತ್ಮರ, ¸ರ್ವೋದಯ ದಿನ ಮತ್ತು ಕುಷ್ಠರೋಗ ನಿವಾರಣಾ ಈಗೆ ತ್ರಿವಳಿದಿನವನ್ನಾಗಿ ಆಚರಿಸುತ್ತೇವೆ, ಸ್ವಾತಂತ್ರ್ಯ ಹೋರಾಟದಲ್ಲಿ ಅಸಂಖ್ಯಾತರು ಹುತಾತ್ಮರಾದರು. ಕೆಲವು ಪ್ರಸಿದ್ಧರು ಇತಿಹಾಸದಲ್ಲಿ ದಾಖಲಾದರು.
ಲಕ್ಷಾಂತರ ಮಂದಿ ದಾಖಲಾಗದವರನ್ನು ಸ್ಮರಿಸಿ ಕೃತಜ್ಞತೆ ಗೌರವ ತೋರುವುದು ಭಾರತೀಯರ ನೈತಿಕ ಕರ್ತವ್ಯ ಎಂದರು. ಬಾರತದ ಗಾಳಿ, ಬೆಳಕು, ನೆಲ, ಜಲದಲ್ಲಿ ಗಾಂಧಿ ಬೆರೆತು ಹೋಗಿದ್ದು. ಗಾಂಧಿ ವ್ಯಕ್ತಿಯಾಗಿ ಕಾಣುವುದಕ್ಕಿಂತ ಈ ದೇಶದ ಸ್ವಾತಂತ್ರ್ಯದ ಅಂತರಂಗದ ಶಕ್ತಿಯಾಗಿ ಗುರುತಿಸಬೇಕು ಎಂದರು.
ಗುಜರಾತ್‍ನ ರವಿಕಿಶೋರ ಸಂತೋಕಿ ಮಾತನಾಡಿದರು
ಶಿಕ್ಷಕಿ ಶ್ರೀದೇವಿ ಸೋನಕಾಂಳೆ, ಸಂಗೀತಾ ಕಾಂಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಅಂಬಿಕಾ ಗಾಯಕವಾಡ್, ಮೌನೇಶ್ವರಿ, ಮಲ್ಲಿಕರ್ಜುನ ಮೇತ್ರೆ ಹಾಗೂ ಮಕ್ಕಳು ಇದ್ದರು.
