ವಿದ್ಯೆ ಕಲಿಸಿದ ಶಿಕ್ಷಕಿಯಿಂದ ಮಾರುಕಟ್ಟೆಗೆ ವಾಹನ ಬಿಡುಗಡೆಗೊಳಿಸಿದ ಉದ್ದಿಮೆದಾರ

ವಿದ್ಯೆ ಕಲಿಸಿದ ಶಿಕ್ಷಕಿಯಿಂದ  ಮಾರುಕಟ್ಟೆಗೆ ವಾಹನ ಬಿಡುಗಡೆಗೊಳಿಸಿದ ಉದ್ದಿಮೆದಾರ

ವಿದ್ಯೆ ಕಲಿಸಿದ ಶಿಕ್ಷಕಿಯಿಂದ ಮಾರುಕಟ್ಟೆಗೆ ವಾಹನ ಬಿಡುಗಡೆಗೊಳಿಸಿದ ಉದ್ದಿಮೆದಾರ 

ಚಿಂಚೋಳಿ : ಪಟ್ಟಣದ ಮಹೇಶ ಹೋಂಡಾ ಶೋ ರೂಮ್ ಉದ್ದಿಮೆ ಮಾಲಿಕ ಮಹೇಶ ಪತ್ತಾರ ಅವರು ಮಾರುಕಟ್ಟೆಗೆ ಬಂದ ನೂತನ ವಾಹನ 100 ಸಿಸಿ ಹೋಂಡಾ ಶೈನ್, 125 ಸಿಸಿ ಸಿ ಬಿಓ ರೆಂಟ್, ಎಕ್ಟಿವಾ 25 ವಾಹನಗಳನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಬೂನಾದಿ ಶಿಕ್ಷಣ ಕಲಿಸಿದ ನೆಚ್ಚಿನ ನಿವೃತ್ತ ಶಿಕ್ಷಕಿ ಶ್ರೀದೇವಿ ಪಾಟೀಲ್ ಅವರಿಂದ ನೂತನ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.

ಶಿಕ್ಷಕ ದಿನಾಚರಣೆ ಗೌರವ ಪೂರ್ವ ಅರ್ಥವಾಗಿ ವಾಹನ ಉದ್ದಿಮೆದಾರ ಮಹೇಶ ಪತ್ತಾರ ನೆಚ್ಚಿನ ಶಿಕ್ಷಕಿ ಮತ್ತು ವಿವಿಧ ರಂಗಗಳಲ್ಲಿ ಗುರುತಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ತರಗಿತಿ ಗೆಳೆಯರನ್ನು ಕರೆಸಿ ನೂತನ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಗೊಳಿಸಿದರು. 

ಬಳಿಕ ಮಾತನಾಡಿದ ಶಿಕ್ಷಕಿ ಶ್ರೀದೇವಿ ಪಾಟೀಲ್, ಮಕ್ಕಳಿಗೆ ಇಷ್ಟದಂತೆ ವಾಹನ ಖರೀದಿಸಿ ನೀಡುವಂತೆ ಜತೆಗೆ ಉತ್ತಮ ಸಂಸ್ಕಾರ ಶಿಕ್ಷಣ ಬೆಳೆವಣಿಗೆಗೆ ಪಾಲಕರು ಒತ್ತು ನೀಡಬೇಕು. ವಾಹನ ಖರೀದಿಸಿ ರಸ್ತೆ ಸುರಕ್ಷೆ ನಿಯಮಗಳು ಪಾಲನೆ ಮಾಡಿಕೊಂಡು ವಾಹನ ಓಡಿಸುವಂತೆ ಮಕ್ಕಳಿಗೆ ಪಾಲಕರು ಅಮೂಲ್ಯವಾದ ಜೀವ ಮತ್ತು ಜೀವನದ ಮಹತ್ವದ ಬಗ್ಗೆ ತಿಳಿಸಬೇಕು ಎಂದರು.

ಶಿಕ್ಷಣ ಪ್ರೇಮಿ ಹಾಗೂ ಸಮಾಜ ಸೇವಕ ಅಶೋಕ ಪಾಟೀಲ್ ಅವರು ಮಾತನಾಡಿದರು. 

ಈ ಸಂಧರ್ಭದಲ್ಲಿ ತರಗತಿ ಗೆಳೆಯರಾದ ವಿಶ್ವನಾಥ ಹೊಡೆಬಿರನಳ್ಳಿ, ರಘು ಕಲ್ಲೂರ್, ಜಗನ್ನಾಥ ಗಾರಂಪಳ್ಳಿ ಸೇರಿದಂತೆ ಶೋ ರೂಮ್ ಕಾರ್ಯ ಸಿಬ್ಬಂದಿ ಗಳು ಉಪಸ್ಥಿತರಿದ್ದರು.