ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಎಸ್.ಕೆ. ಬಿರಾದಾರ ಹಾಗೂ ಅನೀಲಕುಮಾರ ಅಡಿವೆಪ್ಪ ದಾಮರಗಿಡ್ಡ ಆಯ್ಕೆ

ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಎಸ್.ಕೆ. ಬಿರಾದಾರ ಹಾಗೂ ಅನೀಲಕುಮಾರ ಅಡಿವೆಪ್ಪ ದಾಮರಗಿಡ್ಡ ಆಯ್ಕೆ

ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಎಸ್.ಕೆ. ಬಿರಾದಾರ ಹಾಗೂ ಅನೀಲಕುಮಾರ ಅಡಿವೆಪ್ಪ ದಾಮರಗಿಡ್ಡ ಆಯ್ಕೆ

ಕಲಬುರಗಿ:ಅದು.27. ಬೆಂಗಳೂರಿನ ಕರ್ನಾಟಕ ವಚನಸಾಹಿತ್ಯ ಪರಿಷತ್ತು ಹಾಗೂ ಪ್ರೊ. ಬಿ. ಕೃಷ್ಣಪ್ಪ ಟ್ರಸ್ಟ್ ಇವರ ಸಂಯುಕ್ತ ಆಶ್ರಯದಲ್ಲಿ 10ನೇ ವರ್ಷದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಅಂಗವಾಗಿ “ಆದರ್ಶ ಶಿಕ್ಷಕರು” ರಾಜ್ಯಮಟ್ಟದ ಪ್ರಶಸ್ತಿ, ಡಾ. ಎಸ್.ಜಿ. ಸುಶೀಲಮ್ಮ ಪ್ರಶಸ್ತಿ ಪ್ರದಾನ ಹಾಗೂ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ಬೆಂಗಳೂರು ಕರ್ನಾಟಕ ಚಿತ್ರಕಲಾ ಪರಿಷತ್ತು ಸಭಾಂಗಣದಲ್ಲಿ ಸೆಪ್ಟೆಂಬರ್ 7, 2025 ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ.

ಕಲ್ಯಾಣ ಕರ್ನಾಟಕದಲ್ಲಿ ಶರಣಸಾಹಿತ್ಯ, ಸಾಹಿತ್ಯ,ಸಂಸ್ಕೃತಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಎಸ್.ಕೆ. ಬಿರಾದಾರ ಮತ್ತು ಅನೀಲಕುಮಾರ ಅಡಿವೆಪ್ಪ ದಾಮರಗಿಡ್ಡ ಉಭಯ ಶಿಕ್ಷಕರಿಗೆ ಈ ಬಾರಿ ರಾಜ್ಯಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು ಇವರ ಸೇವೆ ಶಿಕ್ಷಕ ವೃತ್ತಿಗೆ ಮಾದರಿಯಾಗಿದ್ದು, ನೂರಾರು ವಿದ್ಯಾರ್ಥಿಗಳ ಜೀವನ ರೂಪಿಸಲು ಕಾರಣವಾಗಿದೆ. 

ಈ ಸಾಧನೆಗೆ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಶಾಂತಲಿಂಗ ಪಾಟೀಲ್ ಕೋಳಕೂರ ಹಾಗೂ ಶರಣ ಚಿಂತಕರಾದ ಸೋಮಶೇಖರ ಪಾಟೀಲ ತೇಗಲತಿಪ್ಪಿ ಹಾರ್ದಿಕ ಅಭಿನಂದನೆ ಸಲ್ಲಿಸಿ, “ಈ ಪ್ರಶಸ್ತಿ ನಮ್ಮ ಜಿಲ್ಲೆಯ ಶೈಕ್ಷಣಿಕ ವಲಯಕ್ಕೆ ಹೆಮ್ಮೆ ತಂದಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.