ಚರ್ಚನ ಪ್ರಾರ್ಥನೆ ಸಮಾಜದ ಒಳಿತಿಗಾಗಿ :ಡಾ.ಮೆರಿಂಡಾ.

ಚರ್ಚನ ಪ್ರಾರ್ಥನೆ ಸಮಾಜದ ಒಳಿತಿಗಾಗಿ :ಡಾ.ಮೆರಿಂಡಾ.

ಸೌಹಾರ್ದತೆಗಾಗಿ ಧಾರ್ಮಿಕ ಮುಖಂಡರ ಬಿಷಪ್ ಬೇಟಿ|

ಚರ್ಚನ ಪ್ರಾರ್ಥನೆ ಸಮಾಜದ ಒಳಿತಿಗಾಗಿ :ಡಾ.ಮೆರಿಂಡಾ. 

ಶಹಾಬಾದ : - ಚರ್ಚನಲ್ಲಿ ನಡೆಯುವ ಪ್ರಾರ್ಥನೆ ಕೇವಲ ಒಬ್ಬ ವ್ಯಕ್ತಿ, ಒಂದು ಧರ್ಮಕ್ಕಾಗಿ ಅಲ್ಲ, ಇಡೀ ಸಮಾಜದ ಒಳಿತಿಗಾಗಿ ಇರುತ್ತದೆ ಎಂದು ಬಿಷಪ್ ಡಾ.ರಾಬರ್ಟ ಮೆರಿಂಡಾ ಹೇಳಿದರು. 

ಅವರು ನಗರದ ಮಜೀದ್ ವೃತ್ತದಲ್ಲಿ ಸೋಮವಾರ ಆಂತರ ಧರ್ಮಿಯರು ಸೌಹಾರ್ದ ಭೇಟ್ಟಿ ನಿಮಿತ್ತ ಮುಸ್ಲಿಂ ಸಮಾಜದ ಮುಖಂಡ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಮ.ಉಬೇದುಲ್ಲಾ ಅವರನ್ನು ಭೇಟ್ಟಿಯಾಗಿ ಸತ್ಕರಿಸಿ ಮಾತನಾಡಿದರು.

ಏಸು ನಿನ್ನನ್ನು ನಾನು ಪ್ರೀತಿಸಿದಂತೆ, ಪರರನ್ನು, ನೆರೆಹೊರೆಯವರನ್ನು ಪ್ರೀತಿಸು ಎಂದು ಹೇಳಿದ್ದು, ಪ್ರತಿ ಧರ್ಮಗಳು ಹೇಳಿದ್ದು, ಧರ್ಮಾಚರಣೆಗಳು ಬೇರೆ ಬೇರೆಯಾದರು, ದೇವರ ಪ್ರೀತಿಗೆ ಪಾತ್ರರಾಗುವದಾಗಿದೆ ಎಂದು ಹೇಳಿದರು. 

ಮುಸ್ಲಿಂ ಸಮಾಜದ ಮುಖಂಡ, ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ ಮಾತನಾಡಿ ಧರ್ಮ ಎಂಬುವದು ಒಂದು ಜೀವನ ಮಾರ್ಗವಾಗಿದೆ. ಸಂತರಿಂದ ಧರ್ಮ ಸ್ಥಾಪನೆಯಾಗಿದೆ ಹೊರತು ಯಾವುದೆ, ರಾಜ,ಮಹಾರಾಜರು, ರಾಜಕೀಯ ನಾಯಕರಿಂದ ಆಗಿಲ್ಲ, ಮಾನವೀಯತೆಯೇ ನಿಜವಾದ ಧರ್ಮ, ಮನುಷ್ಯತ್ವಕ್ಕಿಂತ ದೊಡ್ಡ ಧರ್ಮ ಇಲ್ಲಾ ಎಂದು ಹೇಳಿದರು.

ಶಹಾಬಾದ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಮ.ಉಬೇದುಲ್ಲಾ ಮಾತನಾಡಿದರು, 

ಮ.ಇದ್ರಿಸ್ ಶಾಬಾದಿ ಅವರು ಶಹರಿಗಳನ್ನು ಹೇಳಿದರು. 

ಕಾರ್ಯಕ್ರಮದಲ್ಲಿ ಸೆಂಟ್ ತೋಮಾಸ್ ಚರ್ಚನ ಫಾದರ್ ಜೆರಾಲ್ಡ್ ಸಾಗರ, ಉಪಾಧ್ಯಕ್ಷ ಸ್ಟೇನ್ಲಿ ಹಟನ್, ಕಾರ್ಯದರ್ಶಿ ಜೋಸಫ್ ಮುತ್ತು, ಸದಸ್ಯ ಜೋ ಆನಂದ, ಮುಖಂಡರಾದ ಹಾಶಮ್ ಖಾನ್, ಫಜಲ್ ಪಟೇಲ್, ಮ.ಜಲೀಲ್, ರಾಜೇಶ ಯುನಗುಂಟಿಕರ್, ಅನ್ವರ ಪಾಶಾ, ಮಹ್ಮದ ಅಮ್ಜದ ಸೇರಿದಂತೆ ಇತರರು ಇದ್ದರು.

ಶಹಾಬಾದ್ ವಾರ್ತೆ ನಾಗರಾಜ್ ದಂಡಾವತಿ