ಜಗನ್ನಾಥ ಎಸ್. ಬಿಜನಳ್ಳಿಕರ್ ನೇಮಕ

ಜಗನ್ನಾಥ ಎಸ್. ಬಿಜನಳ್ಳಿಕರ್ ನೇಮಕ

ಜಗನ್ನಾಥ ಎಸ್. ಬಿಜನಳ್ಳಿಕರ್ ನೇಮಕ

ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಿ ಅಂಬೇಡ್ಕರ್ ದ್ವನಿ (ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ) ಸಂಘಟನೆಯ ವತಿಯಿಂದ ನಗರದ ರೈಲ್ವೆ ಸ್ಟೇಷನ್ ಹತ್ತಿರ ವಿರುವ ಹಳೆ ಪ್ರವಾಸಿ ಮಂದಿರದಲ್ಲಿ) ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಚಂದ್ರಕಾಂತ ಎಸ್. ಕಾದ್ರೋಳ್ಳಿ ಅವರ ನೇತೃತ್ವದಲ್ಲಿ ಸಭೆ ನಡೆಸಿ ಈ ಸಭೆಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಎಸ್ ಕಾದ್ರೋಳ್ಳಿ ಬಣ ಕಲಬುರಗಿ ಜಿಲ್ಲಾಧ್ಯಕ್ಷರನಾಗಿ ಜಗನ್ನಾಥ ಎಸ್. ಬಿಜನಳ್ಳಿಕರ್ ಅವರನ್ನು ನೇಮಕ ಮಾಡಲಾಯಿತು. 

 ಚಂದ್ರಕಾಂತ ಎಸ್. ಕಾದ್ರೋಳ್ಳಿ ಅವರು ಮಾತನಾಡಿ ಸಂಘಟನೆಯ ಪದಾಧಿಕಾರಿಗಳು ಬಾಬಾಸಾಹೇಬರ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿರಬೇಕು, ಪದಾಧಿಕಾರಿಗಳು ಸಂಘಟನೆ ವಿರೋಧ ಚಟುವಟಿಕೆ ಮಾಡುವುದು ಕಂಡುಬಂದಲ್ಲಿ ತಕ್ಷಣ ಸಂಘಟನೆಯಿಂದ ತೆಗೆದುಹಾಕಲಾಗುವುದು, ಪದಾಧಿಕಾರಿಗಳು ಸಮಾಜದ ವಿರುದ್ಧ ನಡೆಯುವ ದೌರ್ಜನ್ಯ ದಬ್ಬಾಳಿಕೆ ಬ್ರಷ್ಟಾಚಾರದ ವಿರುದ್ಧ ಕೆಲಸ ಮಾಡಬೇಕು, ಪದಾಧಿಕಾರಿಗಳು ಸಂಪೂರ್ಣವಾಗಿ ರಾಜ್ಯ ಜಿಲ್ಲಾ ತಾಲೂಕು ಗ್ರಾಮ ಮತ್ತು ಹೋಬಳಿ ಘಟಕ ಪದಾಧಿಕಾರಿಗಳನ್ನು ಆಯ್ಕೆಮಾಡತಕ್ಕದ್ದು, ಯಾವುದೇ ಪದಾಧಿಕಾರಿಗಳನ್ನು ತೆಗೆದುಹಾಕುವ ಅಥವಾ ಇಟ್ಟುಕೊಳ್ಳುವ ಅಧಿಕಾರ ಸಂಪೂರ್ಣ ರಾಜ್ಯ ಅಧ್ಯಕ್ಷರು ಹಾಗೂ ಸಂಸ್ಥಾಪಕರಿಗೆ ಮಾತ್ರ ಅಧಿಕಾರ ಇರುತ್ತದೆ. ಇದರ ಹೊರತು ಯಾರು ಯಾರನ್ನು ಸಂಘಟನೆಯಿಂದ ತೆಗೆಯಬಾರದು.

ಸಂಘಟನೆಯ ಪಧಾಧಿಕಾರಿಗಳು ಸಂಘಟನೆ ದುರ್ಬಳಕೆ ಮಾಡಿಕೊಂಡು ಮಾಹಿತಿ ಹಕ್ಕು ಮತ್ತು ಪರ್ತಕರ್ತರೆಂದು ಹಾಗೂ ಲೋಕಾಯುಕ್ತರಿಗೆ ದೂರು ಸಲ್ಲಿಸುವುದು ಕಂಡುಬಂದರೆ ಪದಾಧಿಕಾರಿಗಳನ್ನು ತಕ್ಷಣವೇ ಸಂಘಟನೆಯಿಂದ ತೆಗೆದುಹಾಕಲಾಗುವುದು ಎಂದರು.

ಈ ಸಂದರ್ಭದಲ್ಲಿ ರಾಜ್ಯ ಮಹಿಳಾ ಘಟಕದ ಮಹಾಪ್ರಧಾನ ಕಾರ್ಯದರ್ಶಿ ಬಾಳವ್ವ ಸಂತ್ರಾಮ ಹರಿಜನ, ಧಾರವಾಡ ಜಿಲ್ಲಾಧ್ಯಕ್ಷ ಬಸವರಾಜ, ಮುಖಂಡರಾದ ಮಲ್ಲಿಕಾರ್ಜುನ ಕೊಪ್ಪುರ, ಸಚಿನ್ ಭಂಡಾರಿ, ಬಸವರಾಜ ಬೆಳಗುಂದಿ, ಶಂಕರ್ ಸರಡಗಿ, ಮರಲಿಂಗ ತಾರಫೈಲ್, ಅಂಬಿಶ್ಯಾಳ ಸೇರಿದಂತೆ ಇತರರು ಇದ್ದರು

.