ಜಿಲ್ಲೆಯಲ್ಲಿ ತೋಗರಿ ಬೆಳೆ ಹಾನಿ ನೋಂದ ರೈತ ಗ್ರಾಹಕರಿಗೆ ಬೆಳೆವಿಮಾ ಪರಿಹಾರ ಒದಗಿಸುವಂತೆ ಝಳಕಿ ಆಗ್ರಹ
ಜಿಲ್ಲೆಯಲ್ಲಿ ತೋಗರಿ ಬೆಳೆ ಹಾನಿ ನೋಂದ ರೈತ ಗ್ರಾಹಕರಿಗೆ ಬೆಳೆವಿಮಾ ಪರಿಹಾರ ಒದಗಿಸುವಂತೆ ಝಳಕಿ ಆಗ್ರಹ
ಕಲಬುರಗಿ ಜಿಲ್ಲೆಯಲ್ಲಿ 2024 - 25 ನೆ ಖರಿಫ್ ಸಾಲಿನಲ್ಲಿ ಸಹಸ್ರಾರು ಹೆಕ್ಟರನಲ್ಲಿ ಬೆಳೆದ ತೊಗರಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದ ಸಹಸ್ರಾರು ರೈತ ಗ್ರಾಹಕರು ಪ್ರಧಾನ ಮಂತ್ರಿ ಫಸಲ ಬಿಮಾ ಯೋಜನೆ ಅಡಿ ಇಪ್ಕೊ ಟೋಕಿಯೋ ಬೆಳೆ ವಿಮೆ ಕಂಪನಿಯಲ್ಲಿ ತೋಗರಿ ಹಾಗೂ ಇನ್ನಿತರ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ್ದು ಈ ಯೋಜನೆ ಅಡಿ ಸದರಿ ಬೆಳೆ ವಿಮೆ ಕಂಪನಿಗೆ ಇಗಾಗಲೆ ಸಹಸ್ರಾರು ರೈತರಿಂದ ಕೊಟ್ಯಾಂತರ ರೂಪಾಯಿ ಬೆಳೆ ವಿಮೆ ಕಂತಿನ ಹಣ ಪಾವತಿಯಾಗಿದೆ -ಅದೆ ರೀತಿ ಈ ಬೆಳೆ ವಿಮೆ ಯೋಜನೆಯ ಸಮರ್ಪಕ ಅನುಷ್ಟಾನಕ್ಕಾಗಿ ಸದರಿ ಬೆಳೆ ವಿಮಾ ಕಂಪನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕೊಟ್ಯಾಂತರ ರೂಪಾಯಿ ವಿಮಾ ಕಂತಿನ ಸಾಹಯಧನ ಪಾವತಿಸಿಲಾಗಿದೆ, ಆದರೆ ಈಗಾಗಲೆ ಜಿಲ್ಲೆಯಲ್ಲಿ ಅಧಿಕ ಮಳೆಯಿಂದ ಅಲ್ಪವಧಿ ಬೆಳೆಗಳಾದ ಉದ್ದು, ಹೆಸರು, ಸೋಯಾಭಿನ ಸೇರಿದಂತೆ ಅನೇಕ ಬೆಳೆಗಳು ಹಾಳಾಗಿ ವಿಮೆ ಮಾಡಿಸಿದ ಸಹಸ್ರಾರು ರೈತರು ನಷ್ಟ ಅನುಭವಿಸಿದ್ದಾರೆ.
ಅದೆ ರೀತಿ ಜಿಲ್ಲೆಯ ರೈತರ ಆರ್ಥಿಕ ಬೆಳೆ " ತೋಗರಿ ಬೆಳೆ" ಫಸಲು ನೀಡುವ ವೇಳೆ ಇಗ ನೇಟ್ಟೆ ರೋಗಕ್ಕೆ ಒಳಗಾಗಿ ಫಸಲು ಬಾರದೆ ರೈತರ ನಿರೀಕ್ಷೆ ಹುಸಿ ಮಾಡಿದೆ -ಈ ಬಗ್ಗೆ ಇಗಾಗಲೆ ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಿಲ್ಲೆಯ ತೋಗರಿ ಬೆಳೆದ ಅನೇಕ ರೈತರ ಜಮೀನುಗಳಿಗೆ ಹೋಗಿ ಸಮಿಕ್ಷೆ ಮಾಡಿ ತೊಗರಿ ಬೆಳೆ ಹಾನಿಯಾಗಿದ್ದು ದ್ರಢ ಪಡಿಸಿದ್ದಾರೆ, ಅದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳು ನೊಂದ ರೈತ ಗ್ರಾಹಕರ ಹಿತಕಾಪಾಡಲು ಕೂಡಲೆ ತೊಗರಿ ಹಾಗೂ ಇನ್ನಿತರೆ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ಜಿಲ್ಲೆಯ ಸಂಭದ ಪಟ್ಟ ರೈತರಿಗೆ ಇಪ್ಕೊ ಟೋಕಿಯೋ ಬೆಳೆ ವಿಮಾ ಕಂಪನಿಯಿAದ ಶೇ 100% (ನಿಗದಿ ಪಡಿಸಿದ ವಿಮಾ ಪರಿಹಾರ) ಬೆಳೆ ವಿಮಾ ಪರಿಹಾರ 15 ದಿನದ ಒಳಗೆ ನೇರವಾಗಿ ರೈತರ ಖಾತೆಗೆ ಪಾವತಿಸುವಂತೆ ನಿರ್ದೇಶಿಸಬೇಕೆಂದು ನ್ಯಾಯವಾದಿ - ಸಮಾಜ ಸೇವಕರಾದ ವೈಜನಾಥ ಎಸ್ ಝಳಕಿ ಆಗ್ರಹಿಸಿದ್ದಾರೆ.
ಅದೆ ರೀತಿ ಬೆಳೆ ವಿಮೆ ಮಾಡಿಸದ ಜಿಲ್ಲೆಯ ಇನ್ನುಳಿದ ನೊಂದ ರೈತರಿಗೆ ಬೆಳೆಹಾನಿಗೆ ಪರಿಹಾರವಾಗಿ ಪ್ರತಿ ಎಕರೆಗೆ ರೂ. 25,000 /-ಪರಿಹಾರ ಹಣ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಒದಗಿಸಲು ಆಗ್ರಹಿಸಿದ್ದಾರೆ.