ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರ

ಕಲಬುರಗಿ: ಜಗತ್ ವೃತ್ತದಲ್ಲಿ ಡಾ|| ಬಾಬಾ ಸಾಹೇಬ ಅಂಬೇಡ್ಕರ ರವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಜನಕಲ್ಯಾಣ ಎಜ್ಯುಕೇಶನ ಆಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ (ರಿ), ಕಲಬುರಗಿ

ಇವರ ಆಶ್ರಯದಲ್ಲಿ ಉಚಿತ ಕಣ್ಣಿನ ಹಾಗೂ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ಸಾನಿಧ್ಯವನ್ನು ತಾಜ್ ಸುಲ್ತಾನ್ ಪೂರ್ ವಿಶ್ವಶಾಂತಿ ಬುಧವಿಹಾರದ ಪೂಜ್ಯ ಭಂತೆ ವಿರುದ್ಧ ಭೋಧಿ ವಹಿಸಿದರು, ಬಿ ಎಸ್ ಐ ರಾಜ್ಯ ಅಧ್ಯಕ್ಷ ಸೂರ್ಯಕಾಂತ ನಿಂಬಾಳ್ಕರ್ ಅವರು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜನಕಲ್ಯಾಣ ಎಜುಕೇಶನ್ ಆಂಡ್ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ (ರಿ) ಅಧ್ಯಕ್ಷರಾದ ಸುರೇಶ ಎಸ್. ಕಾನೇಕರ್ ಅವರು ವಹಿಸಿದರು.

ಈ ಕಾರ್ಯಕ್ರಮದಲ್ಲಿ ದತ್ತಾತ್ರೇಯ ಇಕ್ಕಳಕಿ, ಸಿದ್ದಾರ್ಥ ಸಾಲಂಕೆ, ಬಾಬುರಾವ್ ಪಾಸವಾನ, ಬಸವರಾಜ, ಜಗನ್ನಾಥ ನಂದಾ, ಡಾ.ಪ್ರವೀಣ್ ಕುಮಾರ್, ಡಾ.ಪ್ರಿಯಾಂಕ, ಡಾ. ಅಭಿಷೇಕ್, ಡಾ. ಅಭಿಷೇಕ ಪ್ರಸಾದ್, ಡಾ. ಗಂಗಾಧರ್ ಬೋಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.