ಸುರಪುರದಲ್ಲಿ "ಕರ್ನಾಟಕ ಶೂರನಾಯಕ ಸಂಸ್ಥಾನ" ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಸುರಪುರದಲ್ಲಿ "ಕರ್ನಾಟಕ ಶೂರನಾಯಕ ಸಂಸ್ಥಾನ" ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ
ಕಲಬುರಗಿ: ಕನ್ನಡ ವಿಶ್ವವಿದ್ಯಾಲಯ ಹಂಪಿಯ ವಾಲ್ಮೀಕಿ ಅಧ್ಯಯನ ಪೀಠ ಹಾಗೂ ಕರ್ನಾಟಕ ರಾಜ್ಯ ಪತ್ರಗಾರ ಇಲಾಖೆಯ ಸಹಯೋಗದಲ್ಲಿ "ಕರ್ನಾಟಕ ಶೂರನಾಯಕ ಸಂಸ್ಥಾನ: ಸುರಪುರ" ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆ.29 ರಿಂದ 30, 2025ರವರೆಗೆ ಯಾದಗಿರಿ ಜಿಲ್ಲೆಯ ಸುರಪುರದ ಗರುಡಾದ್ರಿ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಇತಿಹಾಸಕಾರರು ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ.
ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಕಲಬುರಗಿಯಿಂದ ನೀಡಿರುವ ಮಾಹಿತಿಯಂತೆ, ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಕಲಬುರಗಿ ವಿಭಾಗದ ಸರ್ಕಾರಿ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಕನ್ನಡ ಮತ್ತು ಇತಿಹಾಸ ವಿಭಾಗದ ಸಹಾಯಕ / ಸಹ ಪ್ರಾಧ್ಯಾಪಕರಿಗೆ ಒಂದು ದಿನದ ಅನ್ಯಕಾರ್ಯ ನಿಮಿತ್ತ ಸೌಲಭ್ಯವನ್ನು ಅನುಮತಿಸಲಾಗಿದೆ.
ಆದಾಗ್ಯೂ, ಭಾಗವಹಿಸುವ ಉಪನ್ಯಾಸಕರು ತಮ್ಮ ಪಾಠ ಪ್ರವಚನಗಳನ್ನು ನಂತರ ವಿಶೇಷ ತರಗತಿಗಳ ಮೂಲಕ ಪೂರೈಸಬೇಕಾಗಿದ್ದು, ವಿಚಾರ ಸಂಕಿರಣದಲ್ಲಿ ಹಾಜರಾದ ಬಗ್ಗೆ ಪ್ರಮಾಣಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.
-