ಆಳಂದ| ಭಾರತೀಯ ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಬಿ. ಆರ್ ಅಂಬೇಡ್ಕರ್.

ಆಳಂದ| ಭಾರತೀಯ ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು  ಡಾ.ಬಿ. ಆರ್  ಅಂಬೇಡ್ಕರ್.

ಆಳಂದ| ಭಾರತೀಯ ಮಹಿಳೆಗೆ ಸ್ವಾಭಿಮಾನದಿಂದ ಬದುಕುವ ಹಕ್ಕು ಕೊಟ್ಟಿದ್ದು ಡಾ.ಬಿ. ಆರ್ ಅಂಬೇಡ್ಕರ್.

ಆಳಂದ: ಕಡಗಂಚಿಯ ಸಾಯಿ ಪ್ರತಾಪ್ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದ ವತಿಯಿಂದ ಸುಕ್ಷೇತ್ರ ಜಿಡಗಾ ಗ್ರಾಮದ ಶ್ರೀ ಸಿದ್ದರಾಮೇಶ್ವರ ಮಂದಿರದ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಸುಮಾರು 60 ಶಿಬಿರಾರ್ಥಿಗಳಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು,

ನಾಗರೀಕ ತರಬೇತಿ ಶಿಬಿರದ ಅಂಗವಾಗಿ ' ಡಾ. ಅಂಬೇಡ್ಕರ್ ಮತ್ತು ಮಹಿಳೆ ' ಕುರಿತು ವಿಶೇಷ ಉಪನ್ಯಾಸ ನೀಡಿದ ಶ್ರೀ ಶಾಂತಪ್ಪ ಹೆಬಳಿ ಮಾತನಾಡಿ ಡಾ. ಅಂಬೇಡ್ಕರ್ ಅವರು ಹಿಂದೂ ಕಾನೂನನ್ನು ವಿರೋಧಿಸುತ್ತಾರೆ ಏಕೆಂದರೆ ಅದು ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸುತ್ತದೆ; ಇದು ಮಹಿಳೆಯರಿಗೆ ವಿಚ್ಛೇದನದ ಹಕ್ಕನ್ನು ನಿರಾಕರಿಸುತ್ತದೆ ಮತ್ತು ಪುರುಷರಿಗೆ ಹಲವಾರು ವಿವಾಹ ಮಾಡಿಕೊಳ್ಳುವ ಹಕ್ಕನ್ನು ನೀಡುತ್ತದೆ ಮತ್ತು ಇಲ್ಲಿನ ಬಹುಪಾಲು ಕಾನೂನುಗಳು ಪುರುಷ ಪ್ರಧಾನವಾದವುಗಳು ಎಂದು ಖಂಡಿಸುತ್ತಾರೆ ಮತ್ತು ಹಿಂದೂ ಕೋಡ್ ಬಿಲ್ ಮೂಲಕ ಇದನ್ನು ತಿದ್ದುಪಡಿ ಮಾಡಲು ಪ್ರಯತ್ನಿಸುತ್ತಾರೆ. ಭಾರತೀಯ ಮಹಿಳೆಯರ ಹಿತದೃಷ್ಟಿಯಿಂದ ಮಸೂದೆಯನ್ನು ಅಂಗೀಕರಿಸುವುದು ಮುಖ್ಯ ಎಂದು ಡಾ.ಬಿ. ಆರ್ ಅಂಬೇಡ್ಕರ್ ಒತ್ತಿ ಹೇಳಿದರು.

ಡಾ. ಅಂಬೇಡ್ಕರ್ ನೆಹರೂ ಅವರಿಗೆ ಈ ಮಸೂದೆಯ ಪ್ರಾಮುಖ್ಯತೆಯ ಬಗ್ಗೆ ತಿಳಿ ಹೇಳಿದರು, ಮತ್ತು ವಿರೋಧಿಗಳನ್ನು ಮನವೊಲಿಸಿ ಮಸೂದೆಯನ್ನು ಅಂಗೀಕರಿಸಿ ಎಂದು ಮನವಿ ಮಾಡಿದರು. ಈ ಹಿಂದೂ ಕೋಡ್ ಬಿಲ್‌ನ ತಿರುಳು ಮಹಿಳೆಯರ ವಿಮೋಚನೆ ಮಾಡುವಾದಾಗಿತ್ತು, ಆದರೆ ಇದು ಸಾಧ್ಯವಾಗದ ಕಾರಣ ತಮ್ಮ ಮಂತ್ರಿ ಪದವಿಗೆ ರಾಜನಾಮಿ ಕೊಟ್ಟು ಹೊರನಡೆದ ಅಪ್ಪಟ ಮಹಿಳಾ ವಾದಿ ಡಾ. ಅಂಬೇಡ್ಕರ್ ಎಂದು ಹೇಳಿದರು.

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಯಿ ಪ್ರತಾಪ್ ಕಲಾ ಮಹಾ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಸುನಿಲ್ ಕುಮಾರ್ ಕಾಂಬಳೆ ವಹಿಸಿದ್ದರು, ಕಾರ್ಯಕ್ರಮಕ್ಕೆ ಎಲ್ಲರನ್ನು ಕಾಲೇಜಿನ ಉಪನ್ಯಾಸಕ ಅಂದಪ್ಪ ಧೋನಿ ಸ್ವಾಗತಿಸಿದರು, ಉಪನ್ಯಾಸಕಿ ಕು.ಅನಿತಾ ಚಂಗಟಿ ನಿರೂಪಿಸಿದರು ಕು.ಕೆ. ಪ್ರಿಯಾ ವಂದಿಸಿದರು, ಕು. ಶೀಲಾ, ಕು ಸುಮಿತ್ರ,ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವರದಿಗಾರರು ಡಾ ಅವಿನಾಶ ಎಸ್ ದೇವನೂರ