ಯುಗಪುರುಷ

ಯುಗಪುರುಷ
ಕಲ್ಯಾಣ ನಾಡ ಹೆಬ್ಬಾಗಿಲು ಕಲಬುರಗಿ
ಶ್ರೀ ಶರಣಬಸವರ ದಿವ್ಯ ಪ್ರಕಾಶ
ಡಾ.ಶರಣಬಸವಪ್ಪ ಅಪ್ಪಾಜಿ ಬೆಳಕು
ಸದಾ ಚಿಂತನೆಯ ಕನಸುಗಾರ
ಆಧ್ಯಾತ್ಮ ಜೀವನದ ದ್ರಷ್ಟಾರ
ವೀರಶೈವ ಧರ್ಮ ಪಸರಿಸಿ
ಶರಣ ಸಂಸ್ಥಾನದ ಮುಕುಟಮಣಿ
ಧರ್ಮ ಸಮನ್ವಯ ಸಾಮರಸ್ಯದ ಸಂತ !
ಶಿಕ್ಷಣಕ್ಕೆ ಅಡಿಯಿಟ್ಟು ದೊಡ್ಡಪ್ಪರಿಂದ
ವಿದ್ಯಾವರ್ಧಕ ಶಿಕ್ಷಣ ಸಂಘದಲಿ
ಹೊಸ ಆಲೋಚನೆ ವಿಜ್ಞಾನ; ತಂತ್ರಜ್ಞಾನಕೆ
ಹೊಸ ಭಾಷ್ಯೆ ಬರೆದ ಶಿಕ್ಷಣ ಪಿತಾಮಹ!
ಆಧುನಿಕ ವಚನ ಲೇಖನ ಸಾಹಿತ್ಯ ರಚಿಸಿ
ಸಾಹಿತ್ಯ,ಕಲೆ,ಸಂಗಿತ,ಚಿತ್ರಕಲೆಗೆ ಆದ್ಯತೆ
ಶಿವಾನುಭವ ಗೋಷ್ಠಿಯಲಿ; ಶ್ರಾವಣ ಮಂಥನೆ
ದಾಸೋಹ ಸೂತ್ರದಲಿ ಜಗತ್ತ ದೃಷ್ಟಿ ಚಿಂತಕ
ಅನ್ನ ಅಕ್ಷರ ಧರ್ಮ,ಸಮಾಜ,ಸಾಂಸ್ಕೃತಿಕ
ತ್ರಿವಿಧ ದಾಸೋಹಿಯಲ್ಲ
ಪಂಚ ದಾಸೋಹ ಸೇವೆಯ ದಾಸೋಹಿ
ಬಹುಮುಖಿ ಪ್ರತಿಭೆಯ ಕಂಡ ನನಸುಗಾರ!
ದೊಡ್ಡಪ್ಪರ- ಗೋದುತಾಯಿಯ ಕಂದ
ಕೋಮಲತೆಯಲಿ ದಾಕ್ಷಾಯಣಿ ಅರಸಿ
ದಾಂಪತ್ಯ ಜೀವನದ ಸವಿ ಜೇನ ಉಂಡ
ಹೆಣ್ಣು-ಗಂಡು ಹೆತ್ತ ಚಿರಂಜೀವಿ ಅಪ್ಪಾಜಿ !
ತತ್ತ್ವಜ್ಞಾನಿ,ಮಹಿಳಾ ಸಬಲೀಕರಣಕೆ ನಾಂದಿ
ಆಡಳಿತದಲಿ ಮಹಾ ಬೆಸುಗೆ ಭಕ್ತರ ಭಾಗ್ಯನಿಧಿ
ಕಷ್ಟದಲಿರುವ ಕಣ್ಣೀರ ಒರೆಸಿ ಸಾಂತ್ವಾನಗಾರ
ದೂರ ದೃಷ್ಟಿ ತೊಂಬತ್ತರಲಿ ಹಿಂದಿಡದ ಹೆಜ್ಜೆಯಗಾರ
ಕರುಣಾನಿಧಿ ಉದಾತ್ತ ಜೀವನ ಅಕ್ಷಯ ಪಾತ್ರೆ
ಸ್ವಾಮಿಗಳ ಅಪ್ಪಿದ ಡಾ.ಚನ್ನವೀರ ಪ್ರೀತಿ ವಾತ್ಸಲ್ಯ
ಎರಡು ಮಠಗಳ ಸೇತುವೆಯ ಪೀಠಾಧಿಪತಿ
ಶರಣ ಸಂತ ದಾರ್ಶನಿಕ ಯುಗಪುರ!!
-ಡಾ.ಗವಿಸಿದ್ಧಪ್ಪ ಎಚ್.ಪಾಟೀಲ
ಕಲಬುರಗಿ
೯೫೩೫೯೧೧೩೧೫