ಕವನದ ಶೀರ್ಷಿಕೆ : ಮನಸ್ಸು ಹಗುರಾಗಿಸು

ಕವನದ ಶೀರ್ಷಿಕೆ : ಮನಸ್ಸು ಹಗುರಾಗಿಸು

ಕವನದ ಶೀರ್ಷಿಕೆ : ಮನಸ್ಸು ಹಗುರಾಗಿಸು

ಕಂಡಿದ್ದೇನಂದು ಕೋಟಿ ಕೋಟಿ ಕನಸು 

ಆಗಲಿಲ್ಲ ಅದರಲ್ಲೊಂದು ನನಸು 

ಕಡಲಿನಲೆಯಂತೆ ನನ್ನಿ ಮನಸ್ಸು 

ತೆರೆಯಾಗಿ ಉಕ್ಕುವುದು ಅರಘಳಿಗೆಯಲಿ ತೆರಳುವುದು 

ನನ್ನ ಕನಸಿಗಿಲ್ಯಾವ ರೆಕ್ಕೆ ಪುಕ್ಕಗಳು 

ಕಣ್ಣೀರಾಗಿ ಹರಿಯುತಿಹದು ನನ್ನೀ ಮನಸ್ಸು

ಕನಸು ಕಾಣಬಾರದೆಂದು ಹೇಳಿತೆನ್ನ ಹೃದಯ 

ಹೃದಯದ ಮಾತಿಗೆ ಮುನಿಸಿಕೊಳ್ಳುತ್ತಿದೆನ್ನ ಮನಸ್ಸು 

ಪದೇ ಪದೇ ನೆನಪಾಗುತಿಹದು ಮತ್ತದೇ ಕನಸು 

ತೆರೆಯ ಮೇಲಿನ ಗುಳ್ಳೆಯಂತಿರುವ ನನ್ನೀ ಮನಸ್ಸು 

ನನ್ನ ಕನಸಿಗಿಲ್ಲ ಬದುಕುವ ಛಲ 

ಮರೆಯುತ್ತಾ ನಿನ್ನೆಯ ಕನಸಾ 

ಹಗುರಾಗಿಸುವ ನನ್ನೀ ಮನಸ್ಸು

ಕಾವ್ಯನಾಮ:ಶೋಭಯಾಮಾನ

ರಚನೆ: ಬಂತನಾಳ ಶೋಭಾರಾಣಿ ಕಲಬುರ್ಗಿ